ಕೊರೋನಾ ಭೀತಿ: ಸೌದಿ ಅರೇಬಿಯಾದಲ್ಲಿ ವಿಮಾನ ಹಾರಾಟ, ಲ್ಯಾಂಡಿಂಗ್ ಸ್ಥಗಿತ..!

masthmagaa.com:

ಜಾಗತಿಕವಾಗಿ 5 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರೋ ಕೊರೋನಾ ವೈರಸ್​ಗೆ ಸೌದಿ ಅರೇಬಿಯಾ ಕೂಡ ನಲುಗಿ ಹೋಗಿದೆ. ಕೋರೋನಾ ಸೋಂಕು ಹರಡದಂತೆ  ತಡೆಯಲು ನಾಳೆಯಿಂದ (ಮಾರ್ಚ್​​ 15) 2 ವಾರಗಳ ಕಾಲ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಹಾಗೂ ಲ್ಯಾಂಡಿಂಗ್​ ಅನ್ನು ಬಂದ್ ಮಾಡಲು ಸೌದಿ ಅರೇಬಿಯಾ ನಿರ್ಧರಿಸಿದೆ.  ಭಾನುವಾರ ಬೆಳಗ್ಗೆ 11 ಗಂಟೆಯಿಂದ ಈ ಆದೇಶ ಜಾರಿಗೆ ಬರಲಿದೆ.

ಇದರ ಪ್ರಕಾರ ಎರಡು ವಾರಗಳ ಸೌದಿ ಅರೇಬಿಯಾದಿಂದ ಯಾವುದೇ ವಿಮಾನ ವಿದೇಶಕ್ಕೆ ಹಾರೋದಿಲ್ಲ. ಅದೇ ರೀತಿ ವಿದೇಶದಿಂದ ಯಾವುದೇ ವಿಮಾನ ಕೂಡ ಸೌದಿಯಲ್ಲಿ ಲ್ಯಾಂಡ್​ ಆಗುವುದಿಲ್ಲ. ಆದರೆ ಕೆಲವೊಂದು ಅತಿ ಅಪರೂಪದ ತುರ್ತು ಸಂದರ್ಭಗಳಲ್ಲಿ ಮಾತ್ರ ಅವಕಾಶವಿದೆ ಅಂತ ಅಲ್ಲಿನ ಸರ್ಕಾರ ಹೇಳಿದೆ.

ಸೌದಿ ಅರೇಬಿಯಾದಲ್ಲಿ ಶುಕ್ರವಾರ ಒಂದೇ ದಿನ ಹೊಸದಾಗಿ 24 ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಆತಂಕ ಹೆಚ್ಚಾಗುವಂತೆ ಮಾಡಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply