masthmagaa.com:

ಕೊರೋನಾ ಸೋಂಕು ಹರಡುವುದನ್ನ ತಡೆಗಟ್ಟಲು ನಿರ್ಮಾಣ ಮಾಡಿರುವ ಸೋಂಕು ನಿವಾರಕ ‘ಕೊರೋನಾ ಸುರಂಗ’ ಅಥವಾ ಡಿಸ್​ಇನ್ಫೆಕ್ಷನ್​ ಟನಲ್, ಹೊಗೆ ಹಾಕುವುದು, ಅತಿ ನೇರಳೆ ಕಿರಣಗಳನ್ನು (Ultraviolet Rays) ಹಾಯಿಸುವುದನ್ನ ಒಂದು ತಿಂಗಳೊಳಗೆ ನಿಷೇಧಿಸಬೇಕು ಅಂತ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅಂದ್ಹಾಗೆ ಕೊರೋನಾ ಸುರಂಗಗಳ ಬಳಕೆಯಿಂದ ಮತ್ತು ಅಲ್ಟ್ರಾವೈಲೆಟ್​ ಕಿರಣಗಳನ್ನ ಹಾಯಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೀಗಾಗಿ ಗುರುಸಿಮ್ರನ್ ಸಿಂಗ್ ಎಂಬ ಕಾನಾನು ವಿದ್ಯಾರ್ಥಿ ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (Public Interest Litigation-PIL) ಸಲ್ಲಿಸಿದ್ರು. ಅರ್ಜಿಯಲ್ಲಿ ಇವುಗಳ ಬಳಕೆ, ಜಾಹೀರಾತು, ಅಳವಡಿಕೆಯನ್ನ ಸಂಪೂರ್ಣವಾಗಿ ಬ್ಯಾನ್ ಮಾಡಲು ನಿರ್ದೇಶಿಸಬೇಕು ಅಂತ ಮನವಿ ಮಾಡಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಒಂದು ತಿಂಗಳೊಳಗಾಗಿ ಇವುಗಳನ್ನ ಬ್ಯಾನ್​ ಮಾಡಲು ಕ್ರಮ ಕೈಗೊಳ್ಳಿ ಅಂತ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply