masthmagaa.com:

ಕೊರೋನಾ ಹಾವಳಿಯಿಂದ ಬಂದ್ ಆಗಿರುವ ಶಾಲೆಗಳನ್ನ ಈ ವರ್ಷ ಆರಂಭ ಮಾಡೋದು ಬೇಡ ಅಂತ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ರಾಜ್ಯ ಸರ್ಕಾರ ಕೂಡ ಈ ಸಮಿತಿಯ ಶಿಫಾರಸಿಗೆ ಅಸ್ತು ಎನ್ನುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಡಿಸೆಂಬರ್​ನಲ್ಲಿ ಶಾಲೆಗಳು ಆರಂಭವಾಗಬಹುದು ಎಂಬ ನಿರೀಕ್ಷೆ ಹುಸಿಯಾಗುವ ಲಕ್ಷಣ ಕಾಣ್ತಿದೆ. ಜೊತೆಗೆ ಡಿಸೆಂಬರ್ ಕೊನೇ ವಾರದಲ್ಲಿ ಪರಿಸ್ಥಿತಿಯನ್ನ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ.

‘ವ್ಯಾಪಕ ಚರ್ಚೆಗಳ ನಂತರ ಡಿಸೆಂಬರ್​ನಲ್ಲಿ ಶಾಲೆಗಳನ್ನ ತೆರೆಯಬಾರದು ಅಂತ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಆದರೂ ಡಿಸೆಂಬರ್ ಕೊನೆಯ ವಾರದಲ್ಲಿ ಕೊರೋನಾ ಪರಿಸ್ಥಿತಿ ಹೇಗಿದೆ ಅನ್ನೋದನ್ನ ಪರಿಶೀಲಿಸಿ ರಾಜ್ಯದಲ್ಲಿ ಯಾವಾಗ ಶಾಲೆಗಳನ್ನ ತೆರೆಯಬೇಕು ಅನ್ನೋದನ್ನ ನಿರ್ಧರಿಸಲಾಗುತ್ತೆ’ ಅಂತ ತಾಂತ್ರಿಕ ಸಲಹಾ ಸಮಿತಿ ಹೇಳಿದೆ.

ರಾಜ್ಯದಲ್ಲಿ ನವೆಂಬರ್ 17ರಿಂದ ಸ್ನಾತಕೋತ್ತರ ಮತ್ತು ಅಂತಿಮ ವರ್ಷದ ಪದವಿ ಕಾಲೇಜುಗಳು ಆರಂಭವಾಗಿವೆ. ಕಾಲೇಜು ಆರಂಭವಾದ ಬಳಿಕ ನಡೆಸಿದ ಕೊರೋನಾ ಪರೀಕ್ಷೆಗಳ ಪೈಕಿ ಬೆಂಗಳೂರಿನಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ. ಮತ್ತೊಂದುಕಡೆ ಕೆಲ ರಾಜ್ಯಗಳಲ್ಲಿ ಶಾಲೆಗಳನ್ನ ತೆರೆದ ಬಳಿಕ ಮಕ್ಕಳು ಮತ್ತು ಶಿಕ್ಷಕರಿಗೂ ಸೋಂಕು ತಗುಲಿದ ಹಿನ್ನೆಲೆ ಶಾಲೆಗಳನ್ನ ಮತ್ತೆ ಬಂದ್ ಮಾಡಲಾಗಿದೆ. ಈ ಎಲ್ಲಾ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

-masthmagaa.com

Contact Us for Advertisement

Leave a Reply