masthmagaa.com:

ಡ್ರಗ್ ಮಾಫಿಯಾದಿಂದ ಚಿತ್ರರಂಗಕ್ಕೆ ಕಳಂಕ ತಟ್ಟುತ್ತಿದೆ. ಯಾರೋ ಒಂದಷ್ಟು ಜನ ಮಾಡುವ ತಪ್ಪುಗಳಿಂದ ಇಡೀ ಚಿತ್ರೋದ್ಯಮವನ್ನು ದೂಷಿಸುವುದು ಸರಿಯಲ್ಲ. ಇದೊಂಥರ ನಿಮಗೆ ಅನ್ನ ನೀಡುವ ತಟ್ಟೆಯಲ್ಲೇ ರಂಧ್ರ ಕೊರೆದಂತೆ ಅಂತ ನಟ & ಬಿಜೆಪಿ ಸಂಸದ ರವಿ ಕಿಶನ್ ಹಾಗೂ ನಟಿ ಕಂಗನಾ ರನಾವತ್ ವಿರುದ್ಧ ರಾಜ್ಯಸಭೆಯಲ್ಲಿ ನಿನ್ನೆ ವಾಗ್ದಾಳಿ ನಡೆಸಿದ್ದ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ನಿವಾಸಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಮುಂಬೈನ ಜುಹು ಪ್ರದೇಶದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ‘ಜಲ್ಸಾ’ ಬಂಗಲೆ ಇದೆ. ಬಾಲಿವುಡ್​​ಗೆ ಅಂಟಿಕೊಂಡಿರುವ ಡ್ರಗ್ಸ್​ ಕಳಂಕವನ್ನು ಕಳಚಲು ಎನ್​ಸಿಬಿ ತನಿಖೆ ನಡೆಸುತ್ತಿರುವಾಗಲೇ  ಜಯಾ ಬಚ್ಚನ್ ನೀಡಿದ ಹೇಳಿಕೆಗೆ ಭಾರಿ ಆಕ್ರೋಶ ಕೇಳಿ ಬಂದಿತ್ತು. ಚಿತ್ರರಂಗದಲ್ಲಿ ಮಾದಕ ವಸ್ತು ಬಳಕೆ ವಿರುದ್ಧ ದನಿ ಎತ್ತುವವರಿಗೆ ಜಯಾ ಬಚ್ಚನ್​ ಬೆದರಿಕೆ ಹಾಕಿದ್ದಾರೆ ಅಂತ ಹೇಳಲಾಗಿತ್ತು. ಈ ಬೆನ್ನಲ್ಲೇ ಅವರ ನಿವಾಸದ ಭದ್ರತೆಯನ್ನು ಹೆಚ್ಚಿಸಲಾಗಿದೆ.

-masthmagaa.com

Contact Us for Advertisement

Leave a Reply