ಸೋಷಿಯಲ್ ಮೀಡಿಯಾಗೆ ಗುಡ್​​ ಬೈ ಹೇಳಲು ಹೊರಟ ನಮೋಗೆ ಕಾಂಗ್ರೆಸ್ ಗುದ್ದು

ದೆಹಲಿ: ಇದೇ ಭಾನುವಾರ ಪ್ರಧಾನಿ ನರೇಂದ್ರ ಮೋದಿ ತಾವು ಸೋಷಿಯಲ್ ಮೀಡಿಯಾಗಳಿಂದ ಹೊರಹೋಗೋದಾಗಿ ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ನಾನು ಸೋಷಿಯಲ್ ಮೀಡಿಯಾಗಳಾದ ಫೇಸ್​ಬುಕ್, ಟ್ವಿಟ್ಟರ್, ಇನ್​ಸ್ಟಾಗ್ರಾಂ ಮತ್ತು ಯೂಟ್ಯೂಬ್​ನಿಂದ ಹೊರಹೋಗೋ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದ್ದರು. ಪ್ರಧಾನಿ ಮೋದಿಯವರ ಟ್ವೀಟ್​​​​ಗೆ 30 ನಿಮಿಷದ ಒಳಗೆ 9 ಸಾವಿರ ಕಮೆಂಟ್ ಮತ್ತು 27 ಸಾವಿರ ಲೈಕ್ಸ್​ಗಳು ಬಂದಿದ್ದವು.

ಪ್ರಧಾನಿ ಮೋದಿಯವರ ನಿರ್ಧಾರಕ್ಕೆ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಿಂದ ಹೊರಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ಅದೇ ರೀತಿ ಪ್ರಧಾನಿ ಮೋದಿ ವಿರೋಧಿಗಳು ಮಾತ್ರ ಇದನ್ನೇ ಅಸ್ತ್ರವನ್ನಾಗಿ ಮಾಡಿ ಮೋದಿ ವಿರುದ್ಧ ಟ್ವೀಟ್ಟರ್​ನಲ್ಲಿ ದಾಳಿ ಮಾಡ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಮೊದಲು ದ್ವೇಷವನ್ನು ಬಿಡಿ..ಸಾಮಾಜಿಕ ಜಾಲತಾಣವನ್ನಲ್ಲ ಅಂತ ಕಾಲೆಳೆದಿದ್ದಾರೆ.

ಇನ್ನು ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಯವರ ಈ ಘೋಷಣೆ ದೇಶಾದ್ಯಂತ ಸೋಷಿಯಲ್ ಮೀಡಿಯಾಗಳನ್ನು ಬ್ಯಾನ್ ಮಾಡೋದಕ್ಕೆ ಮುನ್ನುಡಿಯಾಗಿದೆಯೇ ಎಂದು ಜನ ಚಿಂತೆ ಮಾಡಲು ಕಾರಣವಾಗಿದೆ. ಸಾಮಾಜಿಕ ಜಾಲತಾಣ ಒಳ್ಳೆಯ, ಸಕಾರಾತ್ಮಕ ಮತ್ತು ಉಪಯುಕ್ತ ಸಂದೇಶಗಳನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆಯಾಗಿದೆ ಅನ್ನೋದು ಪ್ರಧಾನಿ ಮೋದಿಯವರಿಗೂ ಗೊತ್ತಿದೆ. ಕೇವಲ ದ್ವೇಷವನ್ನು ಹರಡಲು ಮಾತ್ರ ಸಾಮಾಜಿಕ ಜಾಲತಾಣ ಬಳಕೆಯಾಗುತ್ತಿಲ್ಲ ಅಂತ ಹೇಳಿದ್ದಾರೆ. ‘

Contact Us for Advertisement

Leave a Reply