3ನೇ ಹಂತದ ಭೀತಿ.. ಸಿಂಗಾಪುರ​ ಒಂದು ತಿಂಗಳು ಬಂದ್​..!

masthmagaa.com:

ಕೊರೋನಾ ವೈರಸ್​ ಹರಡುವುದನ್ನ ತಡೆಯಲು ಒಂದಾದ ಮೇಲೊಂದರಂತೆ ಬಹುತೇಕ ರಾಷ್ಟ್ರಗಳು ಲಾಕ್​​ಡೌನ್​ ಮೊರೆ ಹೋಗಿವೆ. ಅದ್ರಲ್ಲಿ ಭಾರತ ಕೂಡ ಒಂದು. ಇದೀಗ ದ್ವೀಪರಾಷ್ಟ್ರ ಸಿಂಗಾಪುರ​ ಕೂಡ ಒಂದು ತಿಂಗಳ ಲಾಕ್​ಡೌನ್​ ಹೇರಲು ನಿರ್ಧರಿಸಿದೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಸಿಂಗಾಪುರ​ ಪ್ರಧಾನಿ ಲೀ ಸೀನ್ ಲೂಂಗ್, ಏಪ್ರಿಲ್ 7ರಿಂದ ಒಂದು ತಿಂಗಳ ಕಾಲ ಲಾಕ್​ಡೌನ್​ ಘೋಷಿಸಿದ್ದಾರೆ. ಈ ಅವಧಿಯಲ್ಲಿ ಕೇವಲ ಅಗತ್ಯ ವಸ್ತುಗಳು ಹಾಗೂ ಪ್ರಮುಖ ಆರ್ಥಿಕ ಕ್ಷೇತ್ರಗಳು ಮುಕ್ತವಾಗಿರುತ್ತವೆ. ಇದನ್ನ ಹೊರತುಪಡಿಸಿ ಶಾಲಾ-ಕಾಲೇಜು ಸೇರಿದಂತೆ ಎಲ್ಲಾ ಸ್ಥಳಗಳನ್ನ ಮುಚ್ಚಲಾಗುವುದು ಎಂದಿದ್ದಾರೆ.

ಸಿಂಗಾಪುರದಲ್ಲಿ ಇದುವರೆಗೆ 1,000ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಆದ್ರೆ ದೇಶದ ಕೆಲ ಭಾಗಗಲ್ಲಿ ಕೊರೋನಾ ವೈರಸ್ 3ನೇ ಹಂತ ತಲುಪಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಲಾಕ್​ಡೌನ್ ಘೋಷಣೆ ಮಾಡಲಾಗ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply