masthmagaa.com:

ಕೇರಳದಲ್ಲಿ ಕೊರೋನಾ ವೈರಸ್​​ ಸಣ್ಣ ಪ್ರಮಾಣದಲ್ಲಿ ರೂಪಾಂತರಗೊಂಡಿದೆ ಅಂತ ಅಲ್ಲಿನ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ. ‘ಕೋಯಿಕ್ಕೋಡ್ ಆರೋಗ್ಯ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಕೊರೋನಾ ವೈರಾಣುವಿನ ಪ್ರಭೇದದಲ್ಲಿ ಸಣ್ಣ ಬದಲಾವಣೆ ಕಾಣಿಸಿಕೊಂಡಿದೆ. ಇದನ್ನ ದೃಢಪಡಿಸಿಕೊಳ್ಳಲು ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಸಂಶೋಧನೆ ನಡೆಸಲಾಗುತ್ತೆ. ಕೇರಳದಲ್ಲಿ ರೂಪಾಂತರಗೊಂಡಿರುವ ವೈರಾಣು ಬ್ರಿಟನ್​ನಲ್ಲಿ ಕಾಣಿಸಿಕೊಂಡ ವೈರಾಣು ಅಲ್ಲ’ ಅಂತಾನೂ ಶೈಲಜಾ ಹೇಳಿದ್ದಾರೆ. ದೇಶದಲ್ಲಿ ಕಳೆದ ಹಲವು ದಿನಗಳಿಂದ ಅತಿ ಹೆಚ್ಚು ಕೊರೋನಾ ಪ್ರಕರಣ ದೃಢಪಡುತ್ತಿರೋದು ಕೇರಳದಲ್ಲೇ. ಅಲ್ಲಿ ಪ್ರತಿದಿನ ನಾಲ್ಕೈದು ಸಾವಿರ ಕೊರೋನಾ ಪ್ರಕರಣ ವರದಿಯಾಗ್ತಿದೆ. ಸೋ ಶೈಲಜಾ ಟೀಚರ್ ಹೇಳಿರುವ ಕೊರೋನಾ ರೂಪಾಂತರಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುವುದಕ್ಕೂ ಸಂಬಂಧ ಇದೆಯಾ ಅನ್ನೋದು ಗೊತ್ತಾಗಬೇಕಿದೆ. ಇನ್ನು ಬ್ರಿಟನ್​ನಿಂದ ಇತ್ತೀಚೆಗೆ ಕೇರಳಕ್ಕೆ ಬಂದವರಲ್ಲಿ 8 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರ ಮಾದರಿಗಳನ್ನ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಲಾಗಿದೆ. ಅದರ ವರದಿ ಬಂದ ಬಳಿಕ ಅದು ಬ್ರಿಟನ್​ನಲ್ಲಿ ಕಾಣಿಸಿಕೊಂಡ ಹೊಸ ಪ್ರಭೇದದ ವೈರಾಣುನಾ ಅನ್ನೋದು ಗೊತ್ತಾಗಲಿದೆ ಅಂತ ಕೆ.ಕೆ. ಶೈಲಜಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply