ದೇಶದಲ್ಲಿ ಒಂದೂವರೆ ಲಕ್ಷ ಜನರಿಗೆ ಸೋಂಕು.. ಯಾವ ದೇಶದಲ್ಲಿ ಎಷ್ಟು ಗೊತ್ತಾ..?

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,387 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ 6,535.. ಇವತ್ತು 6,387.. ಈ ಮೂಲಕ ಸತತ ಎರಡು ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆ ತುಸು ಇಳಿಮುಖವಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,51,767ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 170 ಜನ ಮೃತಪಟ್ಟಿದ್ದು, ದೇಶದಲ್ಲಿ ಒಟ್ಟು ಬಲಿಯಾದವರ ಸಂಖ್ಯೆ 4,337 ಆಗಿದೆ. ಇದುವರೆಗೆ 64,425 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದ ವಿವಿಧ ಆಸ್ಪತ್ರೆಗಳಲ್ಲಿ 83,004 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಬರೋಬ್ಬರಿ 54 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ತಮಿಳುನಾಡಿನಲ್ಲಿ 17 ಸಾವಿರ, ಗುಜರಾತ್​ ಮತ್ತು ದೆಹಲಿಯಲ್ಲಿ ತಲಾ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದೆ.

ಟಾಪ್-10 ಕೊರೋನಾ ಪೀಡಿತ ರಾಷ್ಟ್ರಗಳು:

1. ಅಮೆರಿಕ: 16.81 ಲಕ್ಷ (99,000 ಸಾವು)

2. ಬ್ರೆಜಿಲ್: 3.91 ಲಕ್ಷ (24,000 ಸಾವು)

3. ರಷ್ಯಾ: 3.62 ಲಕ್ಷ (3,800 ಸಾವು)

4. ಬ್ರಿಟನ್: 2.66 ಲಕ್ಷ (37,000 ಸಾವು)

5. ಸ್ಪೇನ್: 2.36 ಲಕ್ಷ (27,000 ಸಾವು)

6. ಇಟಲಿ: 2.30 ಲಕ್ಷ (33,000 ಸಾವು)

7. ಫ್ರಾನ್ಸ್: 1.82 ಲಕ್ಷ (28,000 ಸಾವು)

8. ಜರ್ಮನಿ: 1.81 ಲಕ್ಷ (8,000 ಸಾವು)

9. ಟರ್ಕಿ: 1.58 ಲಕ್ಷ (4,300 ಸಾವು)

10. ಭಾರತ: 1.51 ಲಕ್ಷ (4,337 ಸಾವು)

-masthmagaa.com

Contact Us for Advertisement

Leave a Reply