ಭಾರತ-ಚೀನಾ ಸಂಘರ್ಷ: ಭಾರತದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ

masthmagaa.com:

ಭಾರತ ಮತ್ತು ಅಮೆರಿಕ ನಡುವಿನ ‘2+2’ ಸಚಿವರ ಮಟ್ಟದ ಮಾತುಕತೆ ಹಿನ್ನೆಲೆ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪಾಂಪಿಯೊ, ಪಕ್ಷದ ಚೀನಾಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ‘ಚೀನಾದ ನಿಲುವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಚೀನಾದ ಕಮ್ಯುನಿಸ್ಟ್ ಪಾರ್ಟಿ ಒಡ್ಡುತ್ತಿರುವ ಬೆದರಿಕೆ ಸೇರಿದಂತೆ ಎಲ್ಲಾ ಬೆದರಿಕೆಗಳನ್ನ ಎದುರಿಸಲು ಭಾರತ ಮತ್ತು ಅಮೆರಿಕ ರೆಡಿಯಾಗಿದೆ. ಸದ್ಯ ತನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಎದುರಿಸುತ್ತಿರುವ ಭಾರತದ ಜೊತೆಗೆ ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಅಮೆರಿಕ ಬೆಂಬಲಿಸೋದನ್ನ ಮುಂದುವರಿಸುತ್ತೆ’ ಅಂತ ಪಾಂಪಿಯೊ ಹೇಳಿದ್ದಾರೆ. ಈ ಮೂಲಕ ಚೀನಾದ ಜೊತೆ ಯುದ್ಧವೇನಾದ್ರೂ ಆದ್ರೆ ಅಮೆರಿಕ ಭಾರತದ ಬೆಂಬಲಕ್ಕೆ ನಿಲ್ಲುತ್ತೆ ಅನ್ನೋ ರೀತಿ ಪಾಂಪಿಯೋ ಪರೋಕ್ಷವಾಗಿ ಹೇಳಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್​ ದೋವಲ್​ರನ್ನ ಕೂಡ ಭೇಟಿಯಾಗಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್​ಬಿನ್, ‘ಚೀನಾ ಮತ್ತು ಅಕ್ಕಪಕ್ಕದ ದೇಶಗಳೊಂದಿಗೆ ಭಿನ್ನಾಭಿಪ್ರಾಯ ಸೃಷ್ಟಿಸೋದನ್ನು ನಿಲ್ಲಿಸಿ’ ಅಂತ ಅಮೆರಿಕಗೆ ಎಚ್ಚರಿಸಿದ್ಧಾರೆ.

-masthmagaa.com

 

Contact Us for Advertisement

Leave a Reply