ಕೊರೋನಾ ಐಸೋಲೇಷನ್ ವಾರ್ಡ್​ನಲ್ಲಿದ್ದ ಮೂವರ ಸಾವು..!

masthmagaa.com:

ತಮಿಳುನಾಡು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 900ರ ಗಡಿ ದಾಟಿದೆ. ಈ ನಡುವೆ ತಮಿಳುನಾಡಿನಲ್ಲಿ ಐಸೋಲೇಷನ್​​​​ ವಾರ್ಡ್​​ನಲ್ಲಿದ್ದ 2 ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಕನ್ಯಾಕುಮಾರಿ ಮೂಲದ ಇವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಇವರನ್ನು ಐಸೋಲೇಷನ್ ವಾರ್ಡ್​​ನಲ್ಲಿರಿಸಿ, ಪರೀಕ್ಷೆ ನಡೆಸಲಾಗಿತ್ತು. ಆದ್ರೆ ಕೊರೋನಾ ಪರೀಕ್ಷಾ ವರದಿ ಬರುವ ಮುನ್ನವೇ ಮೂವರು ಸಾವನ್ನಪ್ಪಿರೋದು ಆತಂಕ ಮೂಡಿಸಿದೆ.

ಇವರಲ್ಲಿ 64 ವರ್ಷದ ವೃದ್ಧ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೆ, 24 ವರ್ಷದ ಯುವಕ ನ್ಯುಮೋನಿಯಾದಿಂದ ಬಳಲುತ್ತಿದ್ದ. ಇನ್ನು 2 ವರ್ಷದ ಮಗು ಕೂಡ ಆಸ್ಟಿಯೊಪೆಟ್ರೋಸಿಸ್​ನಿಂದ ಬಳಲುತ್ತಿತ್ತು ಎಂದು ತಿಳಿದು ಬಂದಿದೆ. ಇವರ ಸಾವು ಕೊರೋನಾದಿಂದಲೇ ಸಂಭವಿಸಿದೆಯೋ ಅಥವಾ ಬೇರೆ ಕಾರಣದಿಂದಲೋ ಅನ್ನೋದು ಕೊರೋನಾ ಪರೀಕ್ಷಾ ವರದಿ ಬಂದ ಬಳಿಕ ದೃಢವಾಗಲಿದೆ.

-masthmagaa.com

Contact Us for Advertisement

Leave a Reply