masthmagaa.com:

ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ಉಗ್ರರಿಂದ AK-47 ರೈಫಲ್​ಗಳಿಂತ ಹೆಚ್ಚು ಪಿಸ್ತೂಲ್​ಗಳನ್ನ ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಇದರ ಅರ್ಥ ಉಗ್ರ ಸಂಘಟನೆಗಳು ಶಸ್ತ್ರಾಸ್ತ್ರಗಳ ಕೊರತೆಯನ್ನು ಅನುಭವಿಸುತ್ತಿವೆ ಅಂತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂದ್ಹಾಗೆ ಈ ವರ್ಷ ಜಮ್ಮು-ಕಾಶ್ಮೀರದಲ್ಲಿ 203 ಪಿಸ್ತೂಲ್​ಗಳನ್ನ ಮತ್ತು 152 AK-47 ರೈಫಲ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ವರ್ಷ ನಡೆದ 190 ಹಿಂಸಾತ್ಮಕ ಘಟನೆಗಳಲ್ಲಿ 100 ಘಟನೆ ಗಡಿರೇಖೆ ಬಳಿ ನಡೆದ ಗುಂಡಿನ ದಾಳಿಯಾಗಿವೆ. 44 ಗ್ರೆನೇಡ್​ ದಾಳಿ ಮತ್ತು 1 ಐಇಡಿ ಸ್ಫೋಟ ನಡೆಸಲಾಗಿದೆ. ಈ ವರ್ಷ ನಡೆದ ಎಲ್ಲಾ ಎನ್​ಕೌಂಟರ್​ಗಳಲ್ಲೂ ಪಿಸ್ತೂಲ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ‘ಉಗ್ರ ಸಂಘಟನೆಗಳಲ್ಲಿ ಉನ್ನತ ಹುದ್ದೆ ಹೊಂದಿರುವವರಿಗೆ AK-47 ಸಿಗುತ್ತದೆ. ಆದ್ರೆ ಯುವಕರು ಮತ್ತು ಹೊಸದಾಗಿ ಉಗ್ರ ಸಂಘಟನೆ ಸೇರಿದವರಿಗೆ ಪಿಸ್ತೂಲ್​ಗಳನ್ನೇ ನೀಡಲಾಗುತ್ತದೆ. ಉಗ್ರರಿಗೆ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗಿರುವುದರಿಂದ ಅವರು ಹೆಚ್ಚೆಚ್ಚು ಪಿಸ್ತೂಲ್​ಗಳನ್ನೇ ಬಳಸುತ್ತಿದ್ದಾರೆ’ ಅಂತ ಸಿಆರ್​ಪಿಎಫ್​ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply