ಕೊರೋನಾ ಭೀತಿ ಬಳಿಕ ಮೋದಿ ಸದನಕ್ಕೆ ಬರಲೇ ಇಲ್ಲ: ಟಿಎಂಸಿ ನಾಯಕ

-masthmagaa.com:

ದೆಹಲಿ: ಮಾರ್ಚ್​​ 22ರಿಂದ ಒಂದು ವಾರ 65 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರಬಾರದು ಅಂತ ಕೇಂದ್ರ ಸರ್ಕಾರ ನಿನ್ನೆ ಆದೇಶ ನೀಡಿದೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, ಅಧಿವೇಶನ ಯಾಕೆ ನಡೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 65 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಇರಬೇಕೆಂದು ಕೇಂದ್ರ ತಿಳಿಸಿದೆ. ಭಾನುವಾರ ಜನತಾ ಕರ್ಫ್ಯೂ ಕೂಡ ಹೇರಲಾಗಿದೆ. ಹಾಗಾದ್ರೆ ಪಾರ್ಲಿಮೆಂಟ್ ಯಾಕೆ ನಡೆಯುತ್ತಿದೆ..? ಈ ರೀತಿಯ ಗೊಂದಲಕಾರಿ ಸಂದೇಶ ಯಾಕೆ ನೀಡ್ತಿದ್ದೀರಿ..? ರಾಜ್ಯಸಭೆಯಲ್ಲಿ ಶೇ.44ರಷ್ಟು ಮತ್ತು ಲೋಕಸಭೆಯಲ್ಲಿ ಶೇ.22ರಷ್ಟು ಸದಸ್ಯರು 65 ವರ್ಷ ದಾಟಿದವರಿದ್ದಾರೆ. ಹಾಗಾದ್ರೆ ಇವರೆಲ್ಲಾ ಸರ್ಕಾರದ ಸಲಹೆಯನ್ನು ನಿರ್ಲಕ್ಷಿಸಬೇಕಾ..? ಪ್ರಧಾನಿಯವರು ಕೊರೋನಾ ಭೀತಿ ಶುರುವಾದ ಬಳಿಕ ಸದನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ ಎಂದು ಕಿಡಿಕಾರಿದ್ದಾರೆ.

65 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರಬಾರದು. ಆದ್ರೆ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ವೈದ್ಯರಿಗೆ ಈ ನಿಯಮ ಅನ್ವಯವಾಗೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿತ್ತು. ಆದ್ರೂ ಕೂಡ ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಈ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದಾರೆ ಅಂತ ಬಿಜೆಪಿ ವಾಗ್ದಾಳಿ ನಡೆಸಿದೆ.

-masthmagaa.com

 

Contact Us for Advertisement

Leave a Reply