masthmagaa.com:

ಕೊರೋನಾ ವೈರಸ್​ನಿಂದ ರಕ್ಷಣೆ ನೀಡಲು ಅಮೆರಿಕದ ಫೈಝರ್ (Pfizer) ಮತ್ತು ಬಯೋನ್​ಟೆಕ್ (BioNTech) ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ 3ನೇ ಹಂತದ ಮಾನವ ಪ್ರಯೋಗದ ವೇಳೆ ಶೇ.90ರಷ್ಟು ಕೊರೋನಾದಿಂದ ರಕ್ಷಣೆ ನೀಡಲಿದೆ ಅನ್ನೋದು ಗೊತ್ತಾಗಿದೆ ಅಂತ ಕಂಪನಿಯು ನಿನ್ನೆ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕ ಚುನಾವಣೆಗೂ ಮುನ್ನ ಇದನ್ನ ಘೋಷಿಸಿದ್ರೆ ನಾನು ಗೆಲ್ಲುತ್ತಿದ್ದೆ ಅಂತ ಚುನಾವಣೆ ಮುಗಿದು 5 ದಿನಗಳ ಬಳಿಕ ಇದನ್ನ ಘೋಷಿಸಲಾಗಿದೆ’ ಅಂತ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ, ಫೈಝರ್ ಕಂಪನಿ ಮತ್ತು ಡೆಮಾಕ್ರಟಿಕ್ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಅಂದ್ಹಾಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಲಸಿಕೆಯನ್ನು ಬಿಡುಗಡೆ ಮಾಡಬೇಕು ಅನ್ನೋದು ಟ್ರಂಪ್ ಆಸೆಯಾಗಿತ್ತು. ಇದಕ್ಕಾಗಿ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ ಮೇಲೆ ಟ್ರಂಪ್ ಸಾಕಷ್ಟು ಒತ್ತಡ ಹಾಕಿದ್ದರು. ಆದ್ರೆ ಚುನಾವಣೆಗೂ ಮುನ್ನ ಲಸಿಕೆ ಸಿಕ್ಕಿರಲಿಲ್ಲ. ಇದೀಗ ಟ್ರಂಪ್ ಸೋಲಿನ ಬೆನ್ನಲ್ಲೇ ಫೈಝರ್ ಕಂಪನಿಯು ತನ್ನ ಲಸಿಕೆ ಬಹುತೇಕ ಯಶಸ್ವಿಯಾಗಿದೆ ಅಂತ ಘೋಷಿಸಿದೆ. ಇದು ಡೊನಾಲ್ಡ್ ಟ್ರಂಪ್ ಅಸಮಾಧಾನಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply