ಟ್ವಿಟ್ಟರ್ ಇಂಡಿಯಾದ ಪಬ್ಲಿಕ್ ಪಾಲಿಸಿ ಹೆಡ್ ರಾಜೀನಾಮೆ!

masthmagaa.com:

ದೆಹಲಿ: ಟ್ವಿಟ್ಟರ್ ಇಂಡಿಯಾದ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ಮಹಿಮಾ ಕೌಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2015ರಲ್ಲಿ ಟ್ವಿಟ್ಟರ್ ಸಂಸ್ಥೆ ಸೇರಿದ್ದ ಮಹಿಮಾ ಜನವರಿ ತಿಂಗಳಲ್ಲಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೆ ವೈಯಕ್ತಿಕ ಕಾರಣ ನೀಡಿದ್ದಾರೆ. ಮಾರ್ಚ್ ಅಂತ್ಯದವರೆಗೆ ಇವರು ಟ್ವಿಟ್ಟರ್​​​​​​ನಲ್ಲಿ ಮುಂದುವರಿಯಲಿದ್ದಾರೆ.

ಆದ್ರೆ ದೇಶದಲ್ಲಿ ರೈತರ ಪ್ರತಿಭಟನೆ ಕಾವು ಜೋರಾಗಿರೋದ್ರಿಂದ ಇವರ ರಾಜೀನಾಮೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ವಿವಿಧ ರೀತಿಯ ಚರ್ಚೆಗೆ ಕಾರಣವಾಗಿದೆ. ಕಳೆದ ಬಾರಿ ಹೇಟ್ ಸ್ಪೀಚ್ ವಿಚಾರವಾಗಿ ಟ್ವಿಟ್ಟರ್​​ ಹಲವು ಸ್ಪಷ್ಟನೆಗಳನ್ನು ನೀಡಬೇಕಾಗಿತ್ತು. ಅದೇ ರೀತಿ ಈ ವರ್ಷ ರೈತ ಹೋರಾಟದ ವಿಚಾರವಾಗಿ ನಕಲಿ ಮತ್ತು ಪ್ರಚೋದನಕಾರಿ ಟ್ವೀಟ್​​ಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸ್ತಿದೆ. ಅಲ್ಲದೆ ಸುಮಾರು 250 ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡದೇ ಇದ್ದಲ್ಲಿ ಕಠಿಣ ಕ್ರಮ ಜರುಗಿಸೋದಾಗಿಯೂ ಎಚ್ಚರಿಸಿದೆ.

ಸೋ.. ಇದೇ ಒತ್ತಡದಿಂದಾಗಿ ಮಹಿಮಾ ಕೌಲ್ ರಾಜೀನಾಮೆ ನೀಡ್ತಿದ್ದಾರೆ ಅನ್ನೋ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

-masthmagaa.com

Contact Us for Advertisement

Leave a Reply