masthmagaa.com:
ಕೇಂದ್ರ ಗೃಹ ಸಚಿವ ಮತ್ತು ಪ್ರಧಾನಿ ಮೊದಿಯವರ ರೈಟ್ ಹ್ಯಾಂಡ್ ರೀತಿ ಇರುವ ಅಮಿತ್ ಶಾ ಅವರ ಟ್ವಿಟ್ಟರ್ ಖಾತೆಯನ್ನ ಲಾಕ್ ಮಾಡಲಾಗಿತ್ತು ಅಂತ ಟ್ವಿಟ್ಟರ್ ಹೇಳಿದೆ. ಇದಕ್ಕೆ ಕಾರಣ ಅಮಿತ್ ಶಾ ಹಾಕಿದ್ದ ಪ್ರೊಫೈಲ್ ಫೋಟೋ. ಹೌದು, ಅವರ ಟ್ವಿಟ್ಟರ್ ಪ್ರೊಫೈಲ್ ಫೋಟೋವನ್ನು ಗುರುವಾರ ಸಂಜೆ ಟ್ವಿಟ್ಟರ್ ಸಂಸ್ಥೆ ರಿಮೂವ್ ಮಾಡಿತ್ತು. ಆ ಜಾಗದಲ್ಲಿ ‘This image has been removed in response to a report from the copyright holder’ ಅಂತ ತೋರಿಸುತ್ತಿತ್ತು. ಅಂದ್ರೆ ಅಮಿತ್ ಶಾ ಅವರ ಈ ಫೋಟೋವನ್ನ ತೆಗೆದವರು ಅಥವಾ ಅದರ ಮಾಲೀಕರು ಟ್ವಿಟ್ಟರ್ ಸಂಸ್ಥೆಗೆ ಕಾಪಿರೈಟ್ ದೂರು ನೀಡಿದ್ದರು. ಹೀಗಾಗಿ ಅದನ್ನ ತೆಗೆಯಲಾಗಿತ್ತು ಅಂತ ಅರ್ಥ.
ಈ ಬಗ್ಗೆ ಟ್ವಿಟ್ಟರ್ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದ್ದು, ‘ಗಮನಕ್ಕೆ ಬಾರದ ಒಂದು ತಪ್ಪಿಗಾಗಿ ಜಾಗತಿಕ ಕಾಪಿರೈಟ್ ಪಾಲಿಸಿ ಅಡಿಯಲ್ಲಿ ಅಮಿತ್ ಶಾ ಅವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿತ್ತು. ತಕ್ಷಣ ಅದನ್ನ ಅನ್ಲಾಕ್ ಮಾಡಲಾಯ್ತು. ಸದ್ಯ ಅವರ ಖಾತೆ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದೆ’ ಅಂತ ಹೇಳಿದೆ. ಇದೀಗ ಅದೇ ಫೋಟೋ ಸಮೇತ ಅಮಿತ್ ಶಾ ಅವರ ಟ್ವಿಟ್ಟರ್ ಖಾತೆಯನ್ನ ಅನ್ಲಾಕ್ ಮಾಡಲಾಗಿದೆ. ಕಾಪಿರೈಟ್ ದೂರು ನೀಡಿದವರಿಗೆ ಹಿನ್ನಡೆಯಾಗಿದೆ.
ಟ್ವಿಟ್ಟರ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ದೇಶದ ಎರಡನೇ ವ್ಯಕ್ತಿ ಅಮಿತ್ ಶಾ. ಅವರಿಗೆ 2.36 ಕೋಟಿ ಫಾಲೋವರ್ಸ್ ಇದ್ದಾರೆ. ಮೊದಲ ಸ್ಥಾನದಲ್ಲಿ ಪ್ರಧಾನಿ ಮೋದಿ ಇದ್ದು 6.35 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.
-masthmagaa.com
Contact Us for Advertisement