masthmagaa.com:

ಜಮ್ಮು-ಕಾಶ್ಮೀರದ ಪೂಂಚ್ ಮೂಲಕ ಭಾರತದ ಭೂಪ್ರದೇಶಕ್ಕೆ ದಾರಿ ತಪ್ಪಿ ಬಂದಿದ್ದ ಪಾಕ್​ ಆಕ್ರಮಿತ ಕಾಶ್ಮೀರದ (PoK) ಇಬ್ಬರು ಯುವತಿಯರನ್ನ ಇವತ್ತು ವಾಪಸ್​ ಕಳಿಸಲಾಗಿದೆ. ಇಬ್ಬರನ್ನ ಕೂಡ ಚಕನ್  ದಾ ಬಾಘ್​ ಕ್ರಾಸಿಂಗ್ ಪಾಯಿಂಟ್​ ಮೂಲಕ ಭಾರತೀಯ ಸೇನೆ ಪಿಒಕೆಗೆ ವಾಪಸ್ ಕಳಿಸಿದೆ. ಇದರಲ್ಲಿ ಒಬ್ಬಾಕೆ ಮಾತನಾಡಿ, ‘ನಾವು ದಾರಿ ತಪ್ಪಿ ಭಾರತದ ಭೂಪ್ರದೇಶದೊಳಕ್ಕೆ ಬಂದಿದ್ದೆವು. ಯೋಧರು ನಮಗೆ ಹೊಡೆಯುತ್ತಾರೆ ಅನ್ನೋ ಭಯ ಇತ್ತು. ಆದ್ರೆ ಅವರು ನಮ್ಮನ್ನ ಚೆನ್ನಾಗಿ ನೋಡಿಕೊಂಡರು. ನಮ್ಮನ್ನ ವಾಪಸ್ ಹೋಗಲು ಬಿಡಲ್ಲ ಅಂದುಕೊಂಡಿದ್ದೆವು. ಆದ್ರೆ ಇವತ್ತು ನಮ್ಮನ್ನ ಮನೆಗೆ ವಾಪಸ್ ಕಳಿಸಿದ್ದಾರೆ. ಇಲ್ಲಿನ ಜನ ತುಂಬಾ ಒಳ್ಳೆಯವರು’ ಅಂತ ಹೇಳಿದ್ದಾಳೆ.

-masthmagaa.com

Contact Us for Advertisement

Leave a Reply