ಮಗುವಿಗೆ ತನಗೆ ಚಿಕಿತ್ಸೆ ನೀಡಿದ ವೈದ್ಯರ ಹೆಸರಿಟ್ಟ ಇಂಗ್ಲೆಂಡ್ ಪ್ರಧಾನಿ..!!

masthmagaa.com:

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್​ ಪ್ರಿಯತಮೆಯ ಮಗುವಿಗೆ ತನ್ನ ಜೀವ ಉಳಿಸಿದ ವೈದ್ಯರ ಹೆಸರಿಟ್ಟಿದ್ದಾರೆ. ಬೋರಿಸ್ ಜಾನ್ಸನ್ ಇತ್ತೀಚೆಗಷ್ಟೇ ಕೊರೋನಾಗೆ ತುತ್ತಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈ ನಡುವೆ ಅವರ ಪ್ರಿಯತಮೆ ಕ್ಯಾರಿ ಸೈಮಂಡ್ಸ್​ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಆ ಮಗುವಿಗೆ ವಿಲ್​ಫ್ರೆಡ್​​ ಲೌರಿ ನಿಕೋಲಸ್ ಜಾನ್ಸನ್​ ಎಂದು ಹೆಸರಿಡಲಾಗಿದೆ.

ಇದರಲ್ಲಿ ವಿಲ್​ಫ್ರೆಡ್​ ಬೋರಿಸ್ ಜಾನ್ಸನ್ ಅವರ ತಾತನ ಹೆಸರು.. ಅದೇ ರೀತಿ ಲೌರಿ, ಕ್ಯಾರಿ ಸೈಮಂಡ್ಸ್​ ಅವರ ಅಜ್ಜನ ಹೆಸರು.. ಇನ್ನು ಡಾ. ನಿಕ್ ಪ್ರೈಸ್ ಮತ್ತು ಡಾ.ನಿಕ್ ಹರ್ಟ್​​​ ಎಂಬ ವೈದ್ಯರು ಬೋರಿಸ್ ಜಾನ್ಸನ್ ಅವರು ಆಸ್ಪತ್ರೆಯಲ್ಲಿದ್ದಾಗ ಚಿಕಿತ್ಸೆ ನೀಡಿದ್ದರು. ಹೀಗಾಗಿ ನಿಕೋಲಸ್​​​​ ಅಂತ ಹೆಸರಿಡಲಾಗಿದೆ.

ಒಟ್ಟಾಗಿ ವಿಲ್​ಫ್ರೆಡ್​​ ಲೌರಿ ನಿಕೋಲಸ್ ಜಾನ್ಸನ್​  ಎಂದು ಹೆಸರಿಟ್ಟಿದ್ದೇವೆ ಅಂತ ಕ್ಯಾರಿ ಸೈಮಂಡ್ಸ್​​​​​ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ. ಜೊತೆಗೆ ತನಗೆ ಡೆಲಿವರಿ ಮಾಡಿದ ಆಸ್ಪತ್ರೆ ಮತ್ತು ವೈದ್ಯರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

-masthmagaa.com

 

Contact Us for Advertisement

Leave a Reply