ಅಮೆರಿಕದಲ್ಲಿ ಲಸಿಕೆ ಸಾಗಾಟಕ್ಕೆ ವಿಮಾನ..!ಡಿಸೆಂಬರ್​​​ನಲ್ಲಿ ಲಸಿಕೆ ಕಾರ್ಯಕ್ರಮ

masthmagaa.com:

ಅಮೆರಿಕ: ಫಿಜರ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಅಂತ ಇತ್ತೀಚೆಗಷ್ಟೇ ಹೇಳಿಕೊಂಡಿತ್ತು. ಅದರ  ಬೆನ್ನಲ್ಲೇ ಅಮೆರಿಕದಲ್ಲಿ ಕೊರೋನಾ ಲಸಿಕೆ ವಿತರಣೆಗಾಗಿ ಚಾರ್ಟರ್ ವಿಮಾನ ಸೇವೆ ಆರಂಭವಾಗಿದೆ. ಯುನೈಟೆಡ್​ ಏರ್​ಲೈನ್ಸ್​ ವಿಮಾನದಲ್ಲಿ ಫಿಜರ್ ಕೊರೋನಾ ಲಸಿಕೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲಾಗುತ್ತಿದೆ.

ಅಮೆರಿಕದಲ್ಲಿ ವ್ಯಾಕ್ಸಿನೇಷನ್ ಅಂದ್ರೆ ಲಸಿಕೆ ಹಾಕುವ ಕೇಂದ್ರದ ಹತ್ತಿರದವರೆಗೂ ವಿಮಾನ ಮೂಲಕವೇ ಲಸಿಕೆ ಸಾಗಿಸಲಾಗುತ್ತೆ. ನಂತರ ವಿತರಣೆ ಘಟಕದಿಂದ ಲಸಿಕೆ ಹಾಕುವ ಕೇಂದ್ರಗಳಿಗೆ ಕಳುಹಿಸಲಾಗುತ್ತೆ ಅಂತ ಸಂಸ್ಥೆ ತಿಳಿಸಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸದ್ಯದಲ್ಲೇ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇತ್ತು. ಡಿಸೆಂಬರ್ ಆರಂಭದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಶುರುವಾಗುವ ಸಾಧ್ಯತೆ ಇದೆ.

ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಶಿಯಸ್​​ನಲ್ಲಿ ಸಂಗ್ರಹಿಸಬೇಕಾಗುತ್ತೆ. ಹೀಗಾಗಿ ಯುನೈಟೆಡ್ ಏರ್​​ಲೈನ್ಸ್ ವಿಮಾನಗಳಲ್ಲಿ ಮಂಜುಗಡ್ಡೆಗಳನ್ನು ಇರಿಸಲೂ ಅನುಮತಿ ನೀಡಲಾಗಿದೆ.

-masthmagaa.com

 

 

Contact Us for Advertisement

Leave a Reply