ರಾಜ್ಯದ ಜನತೆಗೆ ಉಪ್ಪಿ 3 ಪ್ರಶ್ನೆ..! ಅದಕ್ಕೆ ನಿಮ್ಮ ಉತ್ತರ ಏನು..?

ಡೈರೆಕ್ಷನ್ ಮೂಲಕ ಸಿನಿಮ ಇಂಡಸ್ಟ್ರಿಯಲ್ಲಿ ತಮ್ಮದೇ ಹೆಸರನ್ನು ಹೊಂದಿರೋ ಉಪೇಂದ್ರ ರಾಜಕೀಯದಲ್ಲೂ ಪ್ರಜಾಕೀಯ ಕಾನ್ಸೆಪ್ಟ್ ತಂದು ಸಂಚಲನ ಮೂಡಿಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರು. ಮುಂದಿನ ಉಪಚುನಾವಣೆಯಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸೋದಾಗಿ ಹೇಳಿದ್ದಾರೆ. ಈ ನಡುವೆ ಅವರು ಟ್ವಿಟ್ಟರ್‍ನಲ್ಲಿ ಕೇಳಿರುವ ಮೂರು ಪ್ರಶ್ನೆಗಳು ಅಭಿಮಾನಿಗಳನ್ನು ಸಾಕಷ್ಟು ಗೊಂದಲಕ್ಕೆ ದೂಡಿದೆ. ಉಪಚುನಾವಣೆ ಘೋಷಣೆಯಾಗಿರುವ ಈ ಹೊತ್ತಲ್ಲಿ ಟ್ವೀಟ್ ಮಾಡಿರುವ ಉಪೇಂದ್ರ, ಈಗಿರುವ ರಾಜಕೀಯ ಪಕ್ಷದಿಂದ ಮತ್ತು ನಾಯಕರಿಂದ ನಮ್ಮ ರಾಜ್ಯಕ್ಕೆ ನಮ್ಮ ಜನರಿಗೆ ಉತ್ತಮ ಭವಿಷ್ಯ ಇದೆಯೇ..? ಇದೆ ಎಂಬ ನಂಬಿಕೆ ಇನ್ನೂ ನಿಮ್ಮಲ್ಲಿದ್ದರೆ ಅದು ಯಾರು..? ಮತ್ತು ಯಾವ ಪಕ್ಷ..? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಆದ್ರೆ ಈ ಪ್ರಶ್ನೆ ಕೇಳಿದ್ದು ಯಾಕೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ.

Contact Us for Advertisement

Leave a Reply