masthmagaa.com:

ಭಾರೀ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಿರ್ಣಾಯಕ ಹಂತ ತಲುಪಿದೆ. ಚುನಾವಣೆ ಎದುರಿಸಿದ 50 ರಾಜ್ಯಗಳ ಪೈಕಿ 44 ರಾಜ್ಯಗಳಲ್ಲಿ ಮತ ಎಣಿಕೆ ಮುಕ್ತಾಯವಾಗಿದೆ. ಅಮೆರಿಕದ ನ್ಯೂಯಾರ್ಕ್​ ಟೈಮ್ಸ್ ಮತ್ತು ವಾಷಿಂಗ್ಟನ್​ ಪೋಸ್ಟ್​ ಪ್ರಕಾರ 538 ಎಲೆಕ್ಟೊರಲ್ ಪೈಕಿ ಡೆಮಾಕ್ರೆಟಿಕ್ ಪಕ್ಷದ ಜೋಸೆಫ್ ಬೈಡೆನ್ 253 ಎಲೆಕ್ಟೊರಲ್​ ಮತ ಪಡೆಯುವ ಮೂಲಕ ಗೆಲುವಿಗೆ ಸನಿಹದಲ್ಲಿದ್ದಾರೆ. ಅದೇ ರೀತಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 214 ಮತಗಳನ್ನ ಪಡೆಯುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ.

ಚುನಾವಣೆ ಗೆಲ್ಲಲು 270 ಎಲೆಕ್ಟೊರಲ್ ಮತಗಳನ್ನ ಪಡೆಯಬೇಕು. ಇದನ್ನ ನೋಡಿದ್ರೆ ಜೋ. ಬೈಡೆನ್ ಮ್ಯಾಜಿಕ್​ ನಂಬರ್​ನ ಸನಿಹದಲ್ಲಿದ್ದಂತೆ ಕಾಣ್ತಿದೆ. ಆದ್ರೆ ಇನ್ನೂ 6 ರಾಜ್ಯಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಇದರಲ್ಲಿ ಪೆನ್​ಸಿಲ್ವೇನಿಯಾ, ನಾರ್ಥ್​ ಕೆರೊಲಿನಾ, ಜಾರ್ಜಿಯಾ, ಅಲಸ್ಕಾ.. ಈ 4 ರಾಜ್ಯಗಳಲ್ಲಿ (54 ಎಲೆಕ್ಟೊರಲ್​ ಮತಗಳು) ಡೊನಾಲ್ಡ್​ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ನೆವಾಡಾ ಮತ್ತು ಅರಿಝೋನಾ ರಾಜ್ಯಗಳಲ್ಲಿ (17 ಎಲೆಕ್ಟೊರಲ್ ಮತಗಳು) ಜೋ. ಬೈಡೆನ್ ಮುಂದಿದ್ದಾರೆ.

ಈಗಿನ ಲೆಕ್ಕಾಚಾರದ ಪ್ರಕಾರ ಡೊನಾಲ್ಡ್​ ಟ್ರಂಪ್ 4 ರಾಜ್ಯಗಳ 54 ಎಲೆಕ್ಟರೊಲ್​ ಮತಗಳನ್ನ ಪಡೆದರೂ 268 (214+54) ಆಗುತ್ತೆ. ಅಂದ್ರೆ ಮ್ಯಾಜಿಕ್ ನಂಬರ್​ಗಿಂತ 2 ಮತ ಕಮ್ಮಿ. ಅದೇ ರೀತಿ ನೆವಾಡಾ ಮತ್ತು ಅರಿಝೋನಾ ರಾಜ್ಯಗಳ 17 ಎಲೆಕ್ಟರೊಲ್ ಮತಗಳನ್ನ ಬೈಡೆನ್ ಪಡೆದ್ರೆ 270 (253+17) ಆಗುತ್ತೆ. ಅಂದ್ರೆ ಮ್ಯಾಜಿಕ್ ನಂಬರ್ ರೀಚ್ ಆದಂತಾಗುತ್ತದೆ. ಆದ್ರೆ ನೆವಾಡ ರಾಜ್ಯದಲ್ಲಿ 86%ನಷ್ಟು ಮತ ಎಣಿಕೆ ಮುಗಿದಿದ್ದು, ಬೈಡೆನ್ 49.3% ಮತ ಗಳಿಸಿದ್ದಾರೆ. ಟ್ರಂಪ್ 48.7% ಮತಗಳನ್ನ ಗಳಿಸಿದ್ದಾರೆ. ಅಂದ್ರೆ ಇಬ್ಬರ​ ನಡುವೆ ಕೇವಲ 1% ಗ್ಯಾಪ್ ಇದೆ. ಇಲ್ಲೇನಾದ್ರೂ ಟ್ರಂಪ್​ ಮುನ್ನಡೆ ಸಾಧಿಸಿದ್ರೆ ಬೈಡೆನ್ ಗೆಲುವು ಕಷ್ಟವಾಗಲಿದೆ.

-masthmagaa.com

Contact Us for Advertisement

Leave a Reply