ಅಮೆರಿಕದಲ್ಲಿ ಮತ್ತೊಂದು ಲಸಿಕೆಗೆ ಗ್ರೀನ್ ಸಿಗ್ನಲ್..!

masthmagaa.com:

ಅಮೆರಿಕ: ಮಾಡರ್ನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ(ಎಫ್​ಡಿಎ) ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಅಮೆರಿಕದಲ್ಲಿ ಬಳಕೆಗೆ ಅನುಮತಿ ಪಡೆದ ಎರಡನೇ ಲಸಿಕೆ ಇದಾಗಿದೆ. ಆರ್​​ಎನ್​ಎ ಮೆಸೆಂಜರ್ ಟೆಕ್ನಾಲಜಿ ಆಧರಿಸಿ ಅಭಿವೃದ್ಧಿಪಡಿಸಿರುವ ಲಸಿಕೆ ಇದಾಗಿದೆ. ಆರ್​ಎನ್​​ಎ ಮೆಸೆಂಜರ್ ಅಂದ್ರೆ ಕೊರೋನಾ ದೇಹ ಪ್ರವೇಶಿಸಿದ್ರೆ ಅದಕ್ಕೆ ವಿರುದ್ಧವಾಗಿ ಪ್ರೊಟೀನ್ ಉತ್ಪಾದನೆ ಮಾಡುವಂತೆ ಜೀವಕೋಶಕ್ಕೆ ಸಂದೇಶ ರವಾನಿಸುತ್ತೆ. ಇದ್ರಿಂದ ಕೊರೋನಾದ ವಿರುದ್ಧ ಹೋರಾಡಲು ಜೀವಕೋಶಗಳಿಗೆ ಸಾಧ್ಯವಾಗುತ್ತೆ.

ಮುಂದಿನ ವಾರಾಂತ್ಯದಲ್ಲಿ 59 ಲಕ್ಷ ಡೋಸ್​​​​ ಲಸಿಕೆ ಉತ್ಪಾದಿಸಿ ಹಂಚುವ ಪ್ಲಾನ್ ಮಾಡಿಕೊಳ್ಳಲಾಗಿದೆ. ಈ ಲಸಿಕೆಯನ್ನು 30 ಸಾವಿರ ಜನರ ಮೇಲೆ ಪ್ರಯೋಗಿಸಲಾಗಿತ್ತು. ಇದರಲ್ಲಿ ಲಸಿಕೆ ಶೇ.95ರಷ್ಟು ಪ್ರಭಾವಶಾಲಿಯಾಗಿದೆ ಅಂತ ಸಂಸ್ಥೆ ಹೇಳಿಕೊಂಡಿತ್ತು.

ಇದಕ್ಕೂ ಮುನ್ನ ಫೈಜರ್ ಮತ್ತು ಬಿಯೋನ್​ಟೆಕ್​ ಅಭಿವೃದ್ಧಿಪಡಿಸಿದ್ದ ಲಸಿಕೆಗೆ ಅಮೆರಿಕದಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಅಲ್ಲದೆ ಈ ವಾರ ಸಾವಿರಾರು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ವಿತರಣೆ ಕೂಡ ಮಾಡಲಾಗಿದೆ.

-masthmagaa.com

Contact Us for Advertisement

Leave a Reply