ಯುಪಿಯಲ್ಲಿ ‘ಆರೋಪಿಗಳಿಂದಲೇ ನಷ್ಟಭರ್ತಿ’ ಕಾನೂನು..! ನಮ್ಮಲ್ಲಿ ಯಾವಾಗ..?

masthmagaa.com:

ಉತ್ತರ ಪ್ರದೇಶದಲ್ಲಿ ವಿಧಾನಸಭೆ ವಿಶೇಷ ಅಧಿವೇಶನ ನಡೀತಿದೆ. ಇಂದು ಒಟ್ಟು 17 ಮಸೂದೆಗಳನ್ನು ಮಂಡಿಸಲಾಗಿದ್ದು, ಅದರಲ್ಲಿ ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ವಸೂಲಿ ಮಸೂದೆ 2020 ಕೂಡ ಸೇರಿದೆ. ಗಲಭೆ, ದಂಗೆಗಳು ನಡೆದಾಗ ಸಂಭವಿಸುವ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಪಾಸ್ತಿ ಹಾನಿಯನ್ನು ಆರೋಪಿಗಳಿಂದಲೇ ವಸೂಲಿ ಮಾಡಲು ಈ ಕಾಯ್ದೆ ಅವಕಾಶ ನೀಡಲಿದೆ. ಈ ಹಿಂದೆ ಸಿಎಎ ವಿರೋಧಿಸಿ ಉತ್ತರ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಗಲಾಟೆ ಸಂಭವಿಸಿತ್ತು. ಉದ್ರಿಕ್ತರು ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿ, ಪುಂಡಾಟ ಮೆರೆದಿದ್ದರು. ಆಗಲೇ ಈ ಕಾಯ್ದೆ ಜಾರಿ ಬಗ್ಗೆ ಘೋಷಿಸಲಾಗಿತ್ತು. ಅದರಂತೆ ಇಂದು ಅಧಿಕೃತವಾಗಿ ಈ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಾಟೆಯಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ನಮ್ಮ ಸರ್ಕಾರ ಆರೋಪಿಗಳಿಂದಲೇ ನಷ್ಟಭರಿಸುವ ಈ ಕಾನೂನನ್ನು ಯಾವಾಗ ಜಾರಿಗೆ ತರುತ್ತೆ ಅಂತ ಕಾದು ನೋಡ್ಬೇಕು..

-masthmagaa.com:

Contact Us for Advertisement

Leave a Reply