1,42,000 ಜನರಿಗೆ ಕೊರೋನಾ.. 5,388 ಜನ ಬಲಿ.. 129 ದೇಶ ಗಢಗಢ

masthmagaa.com:

ಇಡೀ ವಿಶ್ವದಲ್ಲೀಗ ಬರೀ ಕೊರೋನಾ ವೈರಸ್​ ಬಗ್ಗೆಯೇ ಚರ್ಚೆ ನಡೀತಿದೆ. ಇದರ ನಡುವೆಯೇ ಜಾಗತಿಕವಾಗಿ ಕೊರೋನಾ ವೈರಸ್​ ದೃಢಪಟ್ಟ ಪ್ರಕರಣಗಳ ಸಂಖ್ಯೆ 1 ಲಕ್ಷದ 42 ಸಾವಿರ ಗಡಿ ದಾಟಿದೆ ಅನ್ನೋ ಆತಂಕಕಾರಿ ಮಾಹಿತಿಯನ್ನ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಪೈಕಿ ಚೀನಾ ಸೇರಿದಂತೆ ಜಗತ್ತಿನಾದ್ಯಂತ 5,388 ಜನ ಮೃತಪಟ್ಟಿದ್ದಾರೆ. ಅಲ್ಲದೆ ಕೊರೋನಾ ಸೋಂಕು ಹರಡಿರುವ ದೇಶಗಳ ಸಂಖ್ಯೆ 129ಕ್ಕೆ ಏರಿಕೆಯಾಗಿದೆ.

ಕಳೆದ ಡಿಸೆಂಬರ್​ನಲ್ಲಿ ವುಹಾನ್​ನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್​ ಸದ್ಯ ಚೀನಾದಲ್ಲಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಅಂದ್ರೆ ಹೊಸದಾಗಿ ಪತ್ತೆಯಾಗುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದ್ರೆ ಇಟಲಿ ಹಾಗೂ ಇರಾನ್​ನಲ್ಲಿ ಕೊರೋನಾ ಕಾಟ ಮಾತ್ರ ಕಡಿಮೆಯಾಗಿಲ್ಲ. ಇಟಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 17 ಸಾವಿರ ದಾಟಿದ್ದು, ಇರಾನ್​ನಲ್ಲಿ 12 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.

ಉಳಿದಂತೆ ದಕ್ಷಿಣ ಕೊರಿಯಾ, ಫ್ರಾನ್ಸ್, ಸ್ಪೇನ್, ಜರ್ಮನಿಯಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಯುರೋಪ್​ ಖಂಡದಲ್ಲಿ ಕೊರೋನಾ ವೈರಸ್​ ಭೀತಿ ಹೆಚ್ಚಾದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಇದೀಗ ಯುರೋಪ್​ ಅನ್ನು ಕೊರೋನಾ ಪ್ಯಾಂಡೆಮಿಕ್​ನ ‘ಎಪಿಸೆಂಟರ್’ ಅಂತ ಘೋಷಿಸಿದೆ.

-masthmagaa.com

Contact Us for Advertisement

Leave a Reply