masthmagaa.com:

ಭಾರತದಲ್ಲಿ ಕೊರೋನಾ ಲಸಿಕೆಗೆ ಇನ್ನು ಕೆಲವೇ ದಿನಗಳಲ್ಲಿ ಅನುಮೋದನೆ ಸಿಗಲಿದೆ. ಇದೇ ಟೈಮಲ್ಲಿ ಲಸಿಕೆಯ ಬೆಲೆ ಎಷ್ಟು, ಯಾರಿಗೆ ಲಸಿಕೆ ಉಚಿತವಾಗಿ ಸಿಗುತ್ತೆ ಎಂಬ ಚರ್ಚೆಗಳು ಕೂಡ ಶುರುವಾಗಿದೆ. ಕೆಲವೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆಯನ್ನ ಉಚಿತವಾಗಿ ಹಾಕಲು ಮುಂದಾಗಿವೆ. ಅವುಗಳೆಂದರೆ ಮಧ್ಯಪ್ರದೇಶ, ಬಿಹಾರ, ತಮಿಳುನಾಡು, ಪುದಚೆರಿ, ಅಸ್ಸಾಂ. ಇದೀಗ ಆ ಪಟ್ಟಿಗೆ ಕೇರಳ ಕೂಡ ಸೇರಿಕೊಂಡಿದೆ. ಹೌದು, ಲಸಿಕೆ ಹಾಕಲು ಯಾರಿಂದಲೂ ಹಣ ಪಡೆಯುವುದಿಲ್ಲ, ಕೇರಳ ಜನತೆಗೆ ಲಸಿಕೆ ಉಚಿತ ಅಂತ ಸಿಎಂ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳು ಲಸಿಕೆ ಉಚಿತವೋ, ಇಲ್ಲವೋ ಅನ್ನೋದನ್ನ ಇನ್ನೂ ಖಚಿತಪಡಿಸಿಲ್ಲ. ಲಸಿಕೆ ಕುರಿತು ಇತ್ತೀಚೆಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವಾಗ, ಲಸಿಕೆಯ ಬೆಲೆ ಎಷ್ಟು ಅನ್ನೋದನ್ನ ರಾಜ್ಯ ಸಾರ್ಕರಗಳ ಜೊತೆ ಮಾತುಕತೆ ನಡೆಸಿ ನಿರ್ಧರಿಸುತ್ತೇವೆ ಅಂತ ಹೇಳಿದ್ದರು. ಈ ಮೂಲಕ ಕೊರೋನಾ ಲಸಿಕೆ ಉಚಿತವಲ್ಲ ಅನ್ನೋ ಬಗ್ಗೆ ಸುಳಿವು ಕೊಟ್ಟಿದ್ದರು.

-masthmagaa.com

Contact Us for Advertisement

Leave a Reply