masthmagaa.com:

ಭಾರತದ ವಿರುದ್ಧ ಯುದ್ಧೋತ್ಸಾಹದಲ್ಲಿ ಸಾವಿರಾರು ಸೈನಿಕರನ್ನ ಗಡಿಗೆ ಕಳಿಸಿದ್ದ ಚೀನಾ ಈಗ ಕೊರೆಯುವ ಚಳಿಗೆ ತತ್ತರಿಸಿ ಹೋಗಿದೆ. ಲಡಾಖ್​ ಪೂರ್ವ ಭಾಗದ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ವಿಪರೀತ ಚಳಿ ಇದೆ. ಇದನ್ನ ತಡೆದುಕೊಳ್ಳಲು ಚೀನೀ ಸೈನಿಕರಿಗೆ ಕಷ್ಟವಾಗ್ತಿದೆ. ಹೀಗಾಗಿ ಫಾರ್ವರ್ಡ್​ ಪೋಸ್ಟ್​ಗಳಲ್ಲಿರುವ ತನ್ನ ಸೈನಿಕರನ್ನ ಪ್ರತಿದಿನ ರೊಟೇಟ್​ ಮಾಡ್ತಿದೆ. ಚೀನಾದ ಸೇನಾ ತುಕಡಿಗಳು ಬದಲಾಗ್ತಿರೋದು ಭಾರತೀಯ ಯೋಧರಿಗೆ ಕಾಣ್ತಿದೆ ಅಂತ ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಆದ್ರೆ ಅದೇ ಪ್ರದೇಶಗಳಲ್ಲಿ ಭಾರತೀಯ ಯೋಧರು ಹೆಚ್ಚು ದಿನಗಳವರೆಗೆ ಸೇವೆ ಸಲ್ಲಿಸುತ್ತಿದ್ದಾರಂತೆ. ನಮ್ಮ ಯೋಧರಿಗೆ ಲಡಾಖ್, ಸಿಯಾಚಿನ್ ಮತ್ತು ಎತ್ತರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತವೇ ಮೇಲುಗೈ ಸಾಧಿಸಿದೆ.

-masthmagaa.com

Contact Us for Advertisement

Leave a Reply