ರಾಷ್ಟ್ರಪತಿ ಭವನಕ್ಕೂ ಕಾಲಿಟ್ಟ ಮಹಾಮಾರಿ ಕೊರೋನಾ..!

masthmagaa.com:

ದೆಹಲಿ: ರಾಷ್ಟ್ರಪತಿ ಭವನಕ್ಕೂ ಮಹಾಮಾರಿ ಕೊರೋನಾ ಕಂಟಕ ಎದುರಾಗಿದೆ. ರಾಷ್ಟ್ರಪತಿ ಭವನದಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಸಂಬಂಧಿ ಮಹಿಳೆಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈಕೆ ರಾಷ್ಟ್ರಪತಿ ಭವನದ ಉದ್ಯೋಗಿ ಅಲ್ಲದಿದ್ದರೂ, ಅದೇ ಕಟ್ಟದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ರಾಷ್ಟ್ರಪತಿ ಭವನದ ಸ್ವಚ್ಛತಾ ಸಿಬ್ಬಂದಿಯೊಬ್ಬರ ಸೊಸೆಯ ತಾಯಿ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು. ಇಡೀ ಕುಟುಂಬ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿತ್ತು. ಹೀಗಾಗಿ ಇಡೀ ಕುಟುಂಬದ ಎಲ್ಲಾ ಸದಸ್ಯರನ್ನು ಐಸೋಲೇಷನ್​​ನಲ್ಲಿ ಇರಿಸಿ, ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಇಡೀ ಕುಟುಂಬದವರ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಸೊಸೆಯಲ್ಲಿ ಮಾತ್ರವೇ ಕೊರೋನಾ ಇರೋದು ಪತ್ತೆಯಾಗಿದೆ.

ಹೀಗಾಗಿ ರಾಷ್ಟ್ರಪತಿ ಭವನದ ಕಾಂಪ್ಲೆಕ್ಸ್​ನಲ್ಲಿರುವ 125 ಮನೆಗಳ 500ಕ್ಕೂ ಹೆಚ್ಚು ಜನರನ್ನು ಐಸೋಲೇಷನ್​ನಲ್ಲಿ ಇರಿಸಲಾಗಿದೆ.

-masthmagaa.com

Contact Us for Advertisement

Leave a Reply