masthmagaa.com:

ಬ್ರಿಟನ್​ನಲ್ಲಿ ಕಾಣಿಸಿಕೊಂಡಿರುವ ಹೊಸ ಪ್ರಭೇದದ ಕೊರೋನಾ ವೈರಸ್ ಸಂಬಂಧ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಇಂದು ಸುದ್ದಿಗೋಷ್ಠಿ ನಡೆಸಿದ್ರು. ‘ಬ್ರಿಟನ್​ನಿಂದ ನಿನ್ನೆ ಏರ್​ ಇಂಡಿಯಾ ವಿಮಾನದಲ್ಲಿ 246 ಜನ ಕರ್ನಾಟಕಕ್ಕೆ ಬಂದಿದ್ದಾರೆ. ಬ್ರಿಟೀಷ್ ಏರ್​ವೇಸ್​​ ವಿಮಾನದಲ್ಲಿ 291 ಜನ ಬಂದಿದ್ದಾರೆ. ಇವರಲ್ಲಿ ಯಾರಿಗೂ ರೋಗದ ಲಕ್ಷಣ ಇರಲಿಲ್ಲ. ಆದ್ರೆ ಏರ್​ ಇಂಡಿಯಾದಲ್ಲಿ ಬಂದಂತಹ 89 ಜನರ ಬಳಿ ಕೊರೋನಾ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಬ್ರಿಟೀಷ್ ಏರ್​ವೇಸ್​ನಲ್ಲಿ ಬಂದ 49 ಜನರ ಬಳಿ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಒಟ್ಟಾರೆಯಾಗಿ 138 ಜನ ಕೊರೋನಾ ನೆಗೆಟಿವ್ ರಿಪೋರ್ಟ್​ ಇಲ್ಲದೆ ಬೆಂಗಳೂರಿಗೆ ಬಂದಿದ್ದಾರೆ. ನಾವು ಅವರನ್ನ ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ. ನಾಳೆಯೊಳಗೆ ಎಲ್ಲರನ್ನ ಪತ್ತೆಹಚ್ಚುತ್ತೇವೆ. ಅವರಿಗೆ RT-PCR ಪರೀಕ್ಷೆಗಳನ್ನ ನಡೆಸಿ ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್​ಗೆ ಒಳಪಡಿಸುತ್ತೇವೆ. ಬ್ರಿಟನ್​ನಿಂದ ಬೇರೆ ದೇಶಕ್ಕೆ ಬಂದು ಅಲ್ಲಿಂದ ಭಾರತಕ್ಕೆ ಬರುವ ಪ್ರಯಾಣಿಕರ ಮೇಲೂ ನಿಗಾ ಇಡಲಾಗುತ್ತೆ, ಪರೀಕ್ಷೆ ನಡೆಸಲಾಗುತ್ತೆ. ರೋಗದ ಲಕ್ಷಣಗಳಿದ್ದೂ ಬೇರೆ ದೇಶದಿಂದ ಬರುವ ಪ್ರಯಾಣಿಕರನ್ನ ಕೂಡ ಪರೀಕ್ಷೆ ನಡೆಸಿ ಕ್ವಾರಂಟೈನ್​ಗೆ ಒಳಪಡಿಸುತ್ತೇವೆ. ಕಳೆದ 14 ದಿನಗಳಲ್ಲಿ ಬ್ರಿಟನ್​ನಿಂದ ರಾಜ್ಯಕ್ಕೆ ಬಂದವರು ದಯವಿಟ್ಟು RT-PCR ಪರೀಕ್ಷೆ ಮಾಡಿಸಿಕೊಳ್ಳಿ. ಈ ವೈರಾಣು ಹರಡುವ ವೇಗ ತುಂಬಾ ಜಾಸ್ತಿ ಇರುತ್ತೆ. ಹೀಗಾಗಿ ನಿರ್ಲಕ್ಷ್ಯ ಬೇಡ. ಮಾಸ್ಕ್ ಧರಿಸಿ, ಕೊರೋನಾ ನಿಯಂತ್ರಣ ನಿಯಮಗಳನ್ನ ಪಾಲಿಸಿ. ಹಬ್ಬ, ನ್ಯೂ ಇಯರ್ ಪಾರ್ಟಿಗಳನ್ನೆಲ್ಲಾ ಮಾಡೋಕೆ ಹೋಗ್ಬೇಡಿ. ಇಷ್ಟುದಿನ ಎಲ್ಲದಕ್ಕೂ ಅವಕಾಶ ಕೊಟ್ಟಿದ್ದೇವೆ. ಈಗ ಕೊರೋನಾದ ಹೊಸ ಪ್ರಭೇದ ಪತ್ತೆಯಾಗಿರೋದ್ರಿಂದ ಎಲ್ಲರೂ ಸಹಕರಿಸಿ’ ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply