masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 32,695‬ ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಸೋಂಕು ಕಾಣಿಸಿಕೊಂಡಾಗಿನಿಂದ ಇದೇ ಮೊದಲ ಬಾರಿ ಒಂದೇ ದಿನ 30 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,68,876 ಆಗಿದೆ.

ಕಳೆದ 24 ಗಂಟೆಗಳಲ್ಲಿ 606 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 24,915 ಆಗಿದೆ. ಕಳೆದ 24 ಗಂಟೆಗಳಲ್ಲಿ 20,783 ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು 6,12,815 ಸೋಂಕಿತರು ಗುಣಮುಖರಾದಂತಾಗಿದೆ. 3,31,146 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 87 ಸಾವು.. ದಾಖಲೆಯ 3,176 ಜನರಿಗೆ ಸೋಂಕು

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 2.75 ಲಕ್ಷ ದಾಟಿದೆ. ತಮಿಳುನಾಡಿನಲ್ಲಿ 1.51 ಲಕ್ಷ ಮತ್ತು ದೆಹಲಿಯಲ್ಲಿ 1.16 ಲಕ್ಷ ದಾಟಿದೆ. ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ.

ದೇಶದಲ್ಲಿ ನಿನ್ನೆ ದಾಖಲೆಯ 3,26,826 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.27 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ಕೊರೋನಾ ಪೀಡಿತ ಟಾಪ್​-5 ರಾಜ್ಯಗಳು:

1. ಮಹಾರಾಷ್ಟ್ರ: 2,75,640 ಪ್ರಕರಣ (10,928 ಸಾವು)

2. ತಮಿಳುನಾಡು: 1,51,820 ಪ್ರಕರಣ (2,167 ಸಾವು)

3. ದೆಹಲಿ: 1,16,993 ಪ್ರಕರಣ (3,487 ಸಾವು)

4. ಕರ್ನಾಟಕ: 47,253 ಪ್ರಕರಣ (928 ಸಾವು)

5. ಗುಜರಾತ್: 44,552 ಪ್ರಕರಣ (2,079 ಸಾವು)

-masthmagaa.com
Contact Us for Advertisement

Leave a Reply