ಪಬ್ಜಿ ಆಡುವಾಗ ಫ್ರೆಂಡ್ಸ್.. ಬಳಿಕ ಸಾಮೂಹಿಕ ಅತ್ಯಾಚಾರ..!

masthmagaa.com:

ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲೊಂದು ಗ್ಯಾಂಗ್​ರೇಪ್ ಪ್ರಕರಣ ಬೆಳಕಿಗೆ ಬಂದಿದೆ. ವಿಚಿತ್ರ ಅಂದ್ರೆ ಪಬ್ಜಿ ಗೇಮ್​ ಆಡುವಾಗ ಪರಿಚಯವಾದ 14 ವರ್ಷದ ಬಾಲಕಿ ಮೇಲೆಯೇ ಮೂವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಗೆ ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಇವರೆಲ್ಲರೂ ಪಬ್ಜಿ ಫ್ರೆಂಡ್ಸ್ ಆಗಿದ್ದರು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ.

ಪ್ರಕರಣ ಸಂಬಂಧ ಮೂವರು ಕಾಮುಕರನ್ನು ಅರೆಸ್ಟ್ ಮಾಡಲಾಗಿದ್ದು, ಎಫ್​ಐಆರ್ ದಾಖಲಿಸಲಾಗಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅನ್ನೋ ಕೂಗು ಕೇಳಿ ಬರುತ್ತಿರುವಾಗಲೇ ಇಂತಹ ಪ್ರಕರಣಗಳು ಮರುಕಳಿಸುತ್ತಿರೋದು ಆಘಾತಕಾರಿ.

masthmagaa.com

Contact Us for Advertisement

Leave a Reply