masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 19,148‬ ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ 18,653.. ಇವತ್ತು 19,148‬.. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6 ಲಕ್ಷ ಗಡಿ ದಾಟಿದ್ದು 6,04,641ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 434 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 17,834 ಆಗಿದೆ. ಇದುವರೆಗೆ 3,59,860 ಜನ ಗುಣಮುಖರಾಗಿದ್ದಾರೆ. 2,26,947 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಕೊರೋನಾ ಸ್ಫೋಟ.. ಬೆಂಗಳೂರು ಒಂದರಲ್ಲೇ 735 ಕೇಸ್..!

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.80 ಲಕ್ಷ ದಾಟಿದೆ. ತಮಿಳುನಾಡಿನಲ್ಲಿ 94 ಸಾವಿರ ಜನರಿಗೆ ಸೋಂಕು ತಗುಲಿದೆ. ದೆಹಲಿಯಲ್ಲಿ 89 ಸಾವಿರ, ಗುಜರಾತ್​ನಲ್ಲಿ 33 ಸಾವಿರ ಮತ್ತು ಉತ್ತರ ಪ್ರದೇಶದಲ್ಲಿ 24 ಸಾವಿರಕ್ಕೂ ಹೆಚ್ಚು​ ಪ್ರಕರಣ ದೃಢಪಟ್ಟಿವೆ. ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ.

ಆಘಾತಕಾರಿ ಅಂದ್ರೆ ಕೇವಲ 5 ದಿನದಲ್ಲೇ 1 ಲಕ್ಷಕ್ಕೂ ಹೆಚ್ಚು ಪ್ರಕರಣ ಭಾರತದಲ್ಲಿ ವರದಿಯಾಗಿದೆ. ಆರಂಭದಲ್ಲಿ 1 ಪ್ರಕರಣದಿಂದ 1 ಲಕ್ಷ ಪ್ರಕರಣ ದೃಢಪಡಲು 109 ದಿನ ಬೇಕಾಗಿತ್ತು. ಆದ್ರೀಗ ಕೇವಲ 5 ದಿನದಲ್ಲಿ ಒಂದು ಲಕ್ಷ ಪ್ರಕರಣ ದೃಢಪಟ್ಟಿದೆ. ಅಷ್ಟು ವೇಗವಾಗಿ ವ್ಯಾಪಿಸುತ್ತಿದೆ ಕೊರೋನಾ ಮಹಾಮಾರಿ.

ದೇಶದಲ್ಲಿ ಕೊರೋನಾ ಮಿಂಚಿನ ಓಟ:

1 ಪ್ರಕರಣದಿಂದ 1 ಲಕ್ಷ ಪ್ರಕರಣಕ್ಕೆ 109 ದಿನ

1 ಲಕ್ಷದಿಂದ 2 ಲಕ್ಷ ಪ್ರಕರಣಕ್ಕೆ 15 ದಿನ

2 ಲಕ್ಷದಿಂದ 3 ಲಕ್ಷ ಪ್ರಕರಣಕ್ಕೆ 10 ದಿನ

3 ಲಕ್ಷದಿಂದ 4 ಲಕ್ಷ ಪ್ರಕರಣಕ್ಕೆ 8 ದಿನ

4 ಲಕ್ಷದಿಂದ 5 ಲಕ್ಷ ಪ್ರಕರಣಕ್ಕೆ 6 ದಿನ

5 ಲಕ್ಷದಿಂದ 6 ಲಕ್ಷ ಪ್ರಕರಣಕ್ಕೆ 5 ದಿನ

-masthmagaa.com

Contact Us for Advertisement

Leave a Reply