ಯೋಧರ ಮೇಲೆ ದಾಳಿ ನಡೆಸಿದ್ದ ಉಗ್ರ ಕ್ರಿಮಿಗಳು ಫಿನಿಶ್..!

masthmagaa.com:

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಹೆಡೆಮುರಿ ಕಟ್ಟುವ ಕಾರ್ಯಾಚರಣೆ ಭರದಿಂದ ಸಾಗಿದೆ. ಇವತ್ತು ಶ್ರೀನಗರದ ರಾಂಬಾಘ್​ ಎಂಬಲ್ಲಿ ನಡೆದ ಎನ್​​ಕೌಂಟರ್​ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿವೆ. ಓರ್ವ ಪಾಕ್ ಮೂಲದ ಮೋಸ್ಟ್​ ವಾಂಟೆಡ್​ ಉಗ್ರ ಸೈಫುಲ್ಲಾ ಹಾಗೂ ಮತ್ತೋರ್ವ ಸ್ಥಳೀಯ ಉಗ್ರ ಅಂತ ಗೊತ್ತಾಗಿದೆ.

ಸೆಪ್ಟೆಂಬರ್​ನಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ದಾಳಿ ಮತ್ತು ಇತ್ತೀಚೆಗೆ ನೌಗಾಮ್​​ನಲ್ಲಿ ನಡೆದ ದಾಳಿಯಲ್ಲಿ ಸೈಫುಲ್ಲಾ ಭಾಗಿಯಾಗಿದ್ದ ಅಂತ ಪೊಲೀಸರು ತಿಳಿಸಿದ್ದಾರೆ. ನೌಗಾಮ್​ನಲ್ಲಿ ನಡೆದಿದ್ದ ಉಗ್ರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರ ತೀರಿಸಿಕೊಂಡಿರುವ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಫಿನಿಶ್ ಮಾಡಿದೆ. ಇನ್ನುಳಿದ ಉಗ್ರರಿಗಾಗಿ ಶೋಧಕಾರ್ಯ ಮುಂದುವರಿದಿದೆ.

-masthmagaa.com

Contact Us for Advertisement

Leave a Reply