ರಾಜ್ಯದಲ್ಲಿ ಕೊರೋನಾಗೆ ಮತ್ತೊಂದು ಬಲಿ.. ರಾಮನಗರಕ್ಕೂ ಕಾಯಿಲೆ..!

masthmagaa.com:

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನದವರೆಗೆ 69 ಕೊರೋನಾ ಪ್ರಕರಣಗಳು ದೃಢಪಟ್ಟಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಇದುವರೆಗೆ 680 ಜನ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 1,433 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆತಂಕಕಾರಿ ಅಂದ್ರೆ ಗ್ರೀನ್​ ಜೋನ್​ನಲ್ಲಿದ್ದ ರಾಮನಗರಕ್ಕೆ ಕೊರೋನಾ ಕಾಲಿಟ್ಟಿದೆ. ಇತ್ತೀಚೆಗಷ್ಟೇ ತಮಿಳುನಾಡಿನಿಂದ ರಾಮನಗರಕ್ಕೆ ಬಂದಿದ್ದ 2 ವರ್ಷದ ಮಗುವಿನಲ್ಲಿ ಸೋಂಕು ಪತ್ತೆಯಾಗಿದೆ. ಆದ್ರೆ ಮಗುವಿನ ಪೋಷಕರಲ್ಲಿ ಸೋಂಕು ದೃಢಪಟ್ಟಿಲ್ಲ. ಈ ಮೂಲಕ ಗ್ರೀನ್​ ಜೋನ್​​ನಲ್ಲಿದ್ದ ರಾಮನಗರ ಜಿಲ್ಲೆ ಈಗ ಆರೆಂಜ್​ ಜೋನ್​ಗೆ ಹೋಗಿದೆ.

ಹೊಸದಾಗಿ ಪತ್ತೆಯಾದ 69 ಪ್ರಕರಣಗಳಲ್ಲಿ ಬರೋಬ್ಬರಿ 51 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಇಬ್ಬರು ತಮಿಳುನಾಡು, ಒಬ್ಬರು ಉತ್ತರ ಪ್ರದೇಶ, ಒಬ್ಬರು ದೆಹಲಿ ಮತ್ತು ನಾಲ್ವರು ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಹೀಗೆ ಇವತ್ತಿನ 69 ಸೋಂಕಿತರಲ್ಲಿ 59 ಮಂದಿ ಹೊರಗಿನಿಂದ ಬಂದವರೇ ಆಗಿದ್ದಾರೆ.

ಇವತ್ತಿನ ಪ್ರಕರಣಗಳು: 

ಉಡುಪಿ – 16

ಯಾದಗಿರಿ – 15

ಕಲಬುರಗಿ – 14

ಬೆಂಗಳೂರು ನಗರ –  6

ದಕ್ಷಿಣ ಕನ್ನಡ – 3

ಬಳ್ಳಾರಿ – 3

ಧಾರವಾಡ – 3

ಮಂಡ್ಯ – 2

ಕೋಲಾರ – 2

ತುಮಕೂರು – 1

ರಾಮನಗರ – 1

ವಿಜಯಪುರ – 1

ಬೀದರ್ – 1

ಬೆಳಗಾವಿ – 1

-masthmagaa.com

Contact Us for Advertisement

Leave a Reply