masthmagaa.com:
ಐಸಿಸಿ ಬಿಡುಗಡೆ ಮಾಡಿದ ನೂತನ ಟಿ-20 ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಕೆ.ಎಲ್. ರಾಹುಲ್ ಒಂದು ಸ್ಥಾನ ಬಡ್ತಿ ಪಡೆದು 3ನೇ ಸ್ಥಾನಕ್ಕೇರಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡ ಒಂದು ಸ್ಥಾನ ಬಡ್ತಿ ಪಡೆದು 8ನೇ ಸ್ಥಾನಕ್ಕೆ ಏರಿದ್ದಾರೆ. ಉಳಿದಂತೆ ರೋಹಿತ್ ಶರ್ಮಾ 14 ಮತ್ತು ಶಿಖರ್ ಧವನ್ 19ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಹೊಸ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಇಂಗ್ಲೆಂಡ್ನ ಡೇವಿಡ್ ಮಲನ್ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಬಾಬರ ಆಝಮ್ 2ನೇ ಸ್ಥಾನದಲ್ಲಿದ್ದಾರೆ. ಟಾಪ್-10ರಲ್ಲಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ತಲಾ ಇಬ್ಬರು ಆಟಗಾರರಿದ್ದಾರೆ.
1. ಡೇವಿಡ್ ಮಲನ್ – ಇಂಗ್ಲೆಂಡ್
2. ಬಾಬರ್ ಆಝಮ್ – ಪಾಕಿಸ್ತಾನ
3. ಕೆ.ಎಲ್. ರಾಹುಲ್ – ಭಾರತ
4. ಆರೋನ್ ಫಿಂಚ್ – ಆಸ್ಟ್ರೇಲಿಯಾ
5. ವ್ಯಾನ್ ಡೆರ್ ಡಸನ್ – ದಕ್ಷಿಣ ಆಫ್ರಿಕಾ
6. ಕೊಲಿನ್ ಮನ್ರೋ – ನ್ಯೂಜಿಲೆಂಡ್
7. ಗ್ಲೆನ್ ಮ್ಯಾಕ್ಸ್ವೆಲ್ – ಆಸ್ಟ್ರೇಲಿಯಾ
8. ವಿರಾಟ್ ಕೊಹ್ಲಿ – ಭಾರತ
9. ಹಝ್ರತುಲ್ಲಾ ಝಝೈ – ಆಫ್ಘನಿಸ್ತಾನ
10. ಇಯಾನ್ ಮಾರ್ಗನ್ – ಇಂಗ್ಲೆಂಡ್
-masthmagaa.com
Contact Us for Advertisement