masthmagaa.com:

ಐಸಿಸಿ ಬಿಡುಗಡೆ ಮಾಡಿದ ನೂತನ ಟಿ-20 ಬ್ಯಾಟ್ಸ್​ಮನ್​ಗಳ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಕೆ.ಎಲ್​. ರಾಹುಲ್ ಒಂದು ಸ್ಥಾನ ಬಡ್ತಿ ಪಡೆದು 3ನೇ ಸ್ಥಾನಕ್ಕೇರಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡ ಒಂದು ಸ್ಥಾನ ಬಡ್ತಿ ಪಡೆದು 8ನೇ ಸ್ಥಾನಕ್ಕೆ ಏರಿದ್ದಾರೆ. ಉಳಿದಂತೆ ರೋಹಿತ್ ಶರ್ಮಾ 14 ಮತ್ತು ಶಿಖರ್ ಧವನ್ 19ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಹೊಸ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಇಂಗ್ಲೆಂಡ್​ನ ಡೇವಿಡ್ ಮಲನ್ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಬಾಬರ ಆಝಮ್ 2ನೇ ಸ್ಥಾನದಲ್ಲಿದ್ದಾರೆ. ಟಾಪ್-10ರಲ್ಲಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ತಲಾ ಇಬ್ಬರು ಆಟಗಾರರಿದ್ದಾರೆ.

1. ಡೇವಿಡ್ ಮಲನ್ – ಇಂಗ್ಲೆಂಡ್

2. ಬಾಬರ್ ಆಝಮ್ – ಪಾಕಿಸ್ತಾನ

3. ಕೆ.ಎಲ್. ರಾಹುಲ್ – ಭಾರತ

4. ಆರೋನ್ ಫಿಂಚ್ – ಆಸ್ಟ್ರೇಲಿಯಾ

5. ವ್ಯಾನ್ ಡೆರ್ ಡಸನ್ – ದಕ್ಷಿಣ ಆಫ್ರಿಕಾ

6. ಕೊಲಿನ್ ಮನ್ರೋ – ನ್ಯೂಜಿಲೆಂಡ್

7. ಗ್ಲೆನ್ ಮ್ಯಾಕ್ಸ್​ವೆಲ್ – ಆಸ್ಟ್ರೇಲಿಯಾ

8. ವಿರಾಟ್ ಕೊಹ್ಲಿ – ಭಾರತ

9. ಹಝ್ರತುಲ್ಲಾ ಝಝೈ – ಆಫ್ಘನಿಸ್ತಾನ

10. ಇಯಾನ್ ಮಾರ್ಗನ್ – ಇಂಗ್ಲೆಂಡ್

-masthmagaa.com

Contact Us for Advertisement

Leave a Reply