ಪರಿಸರವಾದಿ ವಕೀಲ ರಿತ್ವಿಕ್‌ ದತ್ತಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಸಿಬಿಐ!

masthmagaa.com:

ಪರಿಸರವಾದಿ ವಕೀಲ ರಿತ್ವಿಕ್‌ ದತ್ತಾ ಅವರ ವಿರುದ್ಧ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ CBI ಪ್ರಕರಣ ದಾಖಲಿಸಿದೆ. ರಿತ್ವಿಕ್‌ ಅವರ ಅರಣ್ಯ ಮತ್ತು ಪರಿಸರ ಸಂಬಂಧಿ ಕಾನೂನು ಹೋರಾಟ ಸಂಸ್ಥೆ (ಲೈಫ್‌) ಭಾರತೀಯ ಕಲ್ಲಿದ್ದಲು ಯೋಜನೆಗಳ ವಿರುದ್ಧ ಮೊಕದ್ದಮೆ ಹೂಡುವ ದುರುದ್ದೇಶ ಹೊಂದಿದೆ. ಅದಕ್ಕಾಗಿ ಅಮೆರಿಕ ಮೂಲದ ಅರ್ಥ್ ಜಸ್ಟೀಸ್‌ (ಇಜೆ) ಸಂಸ್ಥೆಯಿಂದ ಹಣ ಪಡೆದಿದ್ದಾರೆ. ಇದು FCRA ಉಲ್ಲಂಘನೆ ಅಂತ ಆರೋಪಿಸಿ ಕೇಂದ್ರ ಗೃಹ ಸಚಿವಾಲಯದ ದೂರು ನೀಡಿತ್ತು. ಅದ್ರ ಅನ್ವಯ ಈಗ CBI FIR ದಾಖಲಿಸಿದೆ. ಆದ್ರೆ ಅದ್ರಲ್ಲಿ ತೊಂದರೆಗೊಳಗಾದ ಕಂಪನಿಗಳ ಪಟ್ಟಿಯಲ್ಲಿ ಅದಾನಿ ಕಂಪನಿ ಹೆಸರು ಮಾತ್ರ ಇದೆ. ಅಂದ್ಹಾಗೆ ರಿತ್ವಿಕ್ ಅವರು ಭಾರತದಲ್ಲಿ ಪರಿಸರ ರಕ್ಷಿಸುವ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, 2021ರಲ್ಲಿ ಅವರಿಗೆ ನೊಬೆಲ್‌ಗೆ ಪರ್ಯಾಯ ಅಂತ ಹೇಳಲಾಗೋ ಲೈವ್ಲಿಹುಡ್‌ ಪ್ರಶಸ್ತಿ ಸಿಕ್ಕಿತ್ತು.

-masthmagaa.com

Contact Us for Advertisement

Leave a Reply