ಭಾರೀ ಪ್ರಮಾಣದಲ್ಲಿ ಯುದ್ಧ ವಿಮಾನ ಖರೀದಿಗೆ ಭಾರತ ಪ್ಲಾನ್..!

masthmagaa.com:

ದೆಹಲಿ: ಒಂದ್ಕಡೆ ಚೀನಾ ಮತ್ತೊಂದ್ಕಡೆ ಪಾಕಿಸ್ತಾನ ಭಾರತಕ್ಕೆ ಕಿರಿಕಿರಿ ಮಾಡ್ತಾನೇ ಇವೆ.. ಹೀಗಾಗಿ ಭಾರತ ತನ್ನ ಸೇನಾಬಲವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಲೇ ಇದೆ. ಅದ್ರ ಭಾಗವಾಗಿಯೇ ರಷ್ಯಾದಿಂದ 33 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. 21 ಮಿಗ್-29 ಮತ್ತು 12 ಸುಖೋಯ್​​​-30ಎಂಕೆಐ ಖರೀದಿಗೆ ಸಿದ್ಧತೆ ನಡೆಸಿದೆ. ಕಳೆದ ವಾರವಷ್ಟೇ ರಕ್ಷಣೆಗೆ ಸಂಬಂಧಿಸಿದ ಸಂಪುಟ ಸಮಿತಿ ಹೆಚ್​​ಎಎಲ್​​​ನಿಂದ 83 ತೇಜಸ್ ಯುದ್ಧ ವಿಮಾನಗಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಇದೀಗ ರಷ್ಯಾದ ಸರ್ಕಾರಿ ಸಂಸ್ಥೆಯಾದ ರೊಸೊಬೊರೊನೆಕ್ಸ್​​ಪೋರ್ಟ್​​​​​ನಿಂದ 7,418 ಕೋಟಿ ರೂಪಾಯಿಗೆ ಮಿಗ್​​​-29 , ಮತ್ತು 10,730 ಕೋಟಿ ರೂಪಾಯಿಗೆ ಸುಖೋಯ್-30 ವಿಮಾನಗಳ ಖರೀದಿಗೆ ಮುಂದಾಗಿದೆ. ಅಷ್ಟೇ ಅಲ್ಲ.. ಮುಂದಿನ ದಿನಗಳಲ್ಲಿ ವಾಯುಪಡೆಗೆ ಮತ್ತೂ 114 ಫೈಟರ್​ಜೆಟ್​​ಗಳನ್ನು ಖರೀದಿಸಲು ಐಎಎಫ್ ಪ್ಲಾನ್ ಹಾಕ್ಕೊಂಡಿದೆ. ಈಗಾಗಲೇ 36 ರಫೇಲ್ ಖರೀದಿಗೆ ಒಪ್ಪಂದ ಆಗಿದ್ರೂ ಕೂಡ ರಫೇಲ್ ಜೊತೆಗೆ ಉಳಿದ ಯಾವ ವಿಮಾನಗಳು ಈ 114 ಫೈಟರ್​ಜೆಟ್​​​ಗಳ ಪಟ್ಟಿಯಲ್ಲಿ ಬರುತ್ತೆ ಅಂತ ಕಾದು ನೋಡಬೇಕು. ಅಂದಹಾಗೆ ಈ 11 ಪೈಟರ್​ಜೆಟ್​​ಗಳನ್ನು ವಿದೇಶಗಳಿಂದ ತರಿಸೋ ಬದಲು ದೇಶದಲ್ಲೇ ಸ್ಟ್ರಾಟಜಿಕ್ ಪಾರ್ಟನರ್ ಶಿಪ್​ ಮೂಲಕ ಉತ್ಪಾದಿಸಲು ನಿರ್ಧರಿಸಲಾಗಿದೆ.

-masthmagaa.com

Contact Us for Advertisement

Leave a Reply