ದೀದಿ.. ನೀವು ಒಬ್ಬಂಟಿಯಾಗಿ ಉಳಿಯುತ್ತೀರಿ: ದೀದಿಗೆ ಅಮಿತ್ ಶಾ ವಾಕ್ಬಾಣ

masthmagaa.com:

ಪಶ್ಚಿಮ ಬಂಗಾಳ: ಕೇಂದ್ರ ಗೃಹಸಚಿವ ಅಮಿತ್ ಶಾ ಟಿಎಂಸಿಯ ಹಿರಿಯ ಬಂಡಾಯ ನಾಯಕರಾದ ಸುವೇಂದು ಅಧಿಕಾರಿ ಮತ್ತು ಇತರೆ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಮಿಡ್ನಾಪುರ್​​ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಟಿಎಂಸಿ ನಾಯಕರನ್ನು ಸ್ವಾಗತಿಸಿ ಮಾತನಾಡಿದ ಅಮಿತ್ ಶಾ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಯಾಕೆ ಹೆಚ್ಚಿನ ನಾಯಕರು ಟಿಎಂಸಿಯನ್ನು ಬಿಟ್ಟು ಹೊರಬರುತ್ತಿದ್ದಾರೆ. ಯಾಕಂದ್ರೆ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಮಮತಾ ಬ್ಯಾನರ್ಜಿಯ ಅಧಿಕಾರ ದುರ್ಬಳಕೆ ಹೆಚ್ಚಾಗಿದೆ. ದೀದಿ.. ಇದು ಕೇವಲ ಆರಂಭ ಮಾತ್ರ. ಚುನಾವಣೆ ನಡೆಯುವ ಹೊತ್ತಿಗೆ ನೀವು ಒಬ್ಬಂಟಿಯಾಗಿ ಉಳಿದುಕೊಳ್ಳುತ್ತೀರಿ ಅಂತ ಅಮಿತ್ ಶಾ ಸವಾಲ್ ಎಸೆದಿದ್ಧಾರೆ.

ಸುವೇಂದು ಅಧಿಕಾರಿ ಮತ್ತು ಟಿಎಂಸಿ ನಾಯಕರು ಮಾತ್ರವಲ್ಲ.. ಅವರ ಜೊತೆಗೆ ವಿವಿಧ ಪಕ್ಷಗಳ ಒಟ್ಟು 9 ಮಂದಿ ಶಾಸಕರು ಬಿಜೆಪಿ ಸೇರಿದ್ಧಾರೆ. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ 200ರಲ್ಲಿ ಜಯ ಸಾಧಿಸಿ ಬಿಜೆಪಿ ಅಧಿಕಾರಕ್ಕೆ ಏರಲಿದೆ ಅಂತ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರೋ ಅಮಿತ್ ಶಾ ಇವತ್ತು ಸ್ವಾಮಿ ವಿವೇಕಾನಂದ, ಕ್ರಾಂತಿಕಾರಿ ಖುದಿರಾಮ್ ಬೋಸ್​​​​​​ಗೆ ಶ್ರದ್ಧಾಂಜಲಿ ಸಲ್ಲಿಸಿದ್ರು. ನಂತರ ಮಧ್ಯಾಹ್ನ ರೈತರ ಮನೆಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡಿದ್ರು.

-masthmagaa.com

Contact Us for Advertisement

Leave a Reply