masthmagaa.com:

ದೆಹಲಿ: ರಾಜ್ಯದಲ್ಲಿ ಕೊರೋನಾದ 3ನೇ ಅಲೆಯೂ ಮಾಯವಾಗಿದೆ ಅಂತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಕಳೆದ ತಿಂಗಳು ದಿನಕ್ಕೆ 8 ಸಾವಿರದವರೆಗೆ ಏರಿಕೆಯಾಗಿದ್ದ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಉಂಟಾಗಿದ್ದು, 1,133ಕ್ಕೆ ಇಳಿಕೆಯಾಗಿದೆ. ಕೊರೋನಾ ಸೋಂಕು ಹರಡುವಿಕೆಯ ಪ್ರಮಾಣ ನವೆಂಬರ್​​​​ನಲ್ಲಿ ಶೇ.15.26ರಷ್ಟಿತ್ತು. ಆದ್ರೆ ಈಗ ಆ ಪ್ರಮಾಣ ಶೇ.1.3ಗೆ ಇಳಿಕೆಯಾಗಿದೆ. ಇದು ದೆಹಲಿ ಮತ್ತು ಇಡೀ ದೇಶದ ವಿವಿಧ ರಾಜ್ಯಗಳಲ್ಲಿ ಅತಿ ಕಡಿಮೆ ದರವಾಗಿದೆ ಅಂತ ಹೇಳಿದ್ದಾರೆ. ಇದ್ರಿಂದ ರಾಜ್ಯದಲ್ಲಿ ಕೊರೋನಾ 3ನೇ ಅಲೆಯೂ ನಿಲುಗಡೆಯತ್ತ ಸಾಗಿದೆ ಅನ್ನೋದು ಗೊತ್ತಾಗುತ್ತೆ. ಇವತ್ತು 90 ಸಾವಿರ ಟೆಸ್ಟ್​ಗಳನ್ನು ಮಾಡಲಾಗಿದ್ದು, ಇಡೀ ದೇಶದಲ್ಲಿ ಇದೊಂದು ದಾಖಲೆಯಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply