17 ವರ್ಷದಲ್ಲೇ ಕನಿಷ್ಠ ತಾಪಮಾನ ದಾಖಲು.. ಎಲ್ಲಿ ಗೊತ್ತಾ?

masthmagaa.com:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಬೆಳಗ್ಗೆ ತೀವ್ರ ಚಳಿ ಅನುಭವಕ್ಕೆ ಬಂದಿದ್ದು, ಕನಿಷ್ಠ ತಾಪಮಾನ 6.9 ಡಿಗ್ರಿ ಸೆಲ್ಸಿಯಸ್​​ಗೆ ಕುಸಿತ ಕಂಡಿದೆ. ಇದು ಕಳೆದ 17 ವರ್ಷಗಳಲ್ಲೇ ನವೆಂಬರ್‌ ತಿಂಗಳಲ್ಲಿ ದಾಖಲಾದ ಅತೀ ಕಡಿಮೆ ತಾಪಮಾನ ಅಂದ್ರೆ, 2003 ರಲ್ಲಿ 6.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು ಅಂತ ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ಕನಿಷ್ಠ ತಾಪಮಾನ 8.5 ಡಿಗ್ರಿ ಸೆಲ್ಸಿಯಸ್‌ ಇತ್ತು. ಆದ್ರೆ ಇಂದು ಮತ್ತಷ್ಟು ಕಡಿಮೆಯಾಗಿದೆ. ಸೋಮವಾರದವರೆಗೂ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್​​ಗಿಂತ ಕಡಿಮೆ ಇದ್ದು, ಶೀತ ಗಾಳಿ ಬೀಸುವ ಸಾಧ್ಯತೆ ಇದೆ. ಬಳಿಕ ಕನಿಷ್ಠ ತಾಪಮಾನ ಕಂಟ್ರೋಲ್​ಗೆ ಬರುವ ಸಾಧ್ಯತೆ ಅಂತ ಹವಾಮಾನ ಇಲಾಖೆ  ತಿಳಿಸಿದೆ. ದೆಹಲಿಯಲ್ಲಿ ಕಳೆದ ವರ್ಷ ಕನಿಷ್ಠ ತಾಪಮಾನ 11.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2018 ರಲ್ಲಿ 10.5 ಮತ್ತು 2017ರಲ್ಲಿ 7.6 ಡಿಗ್ರಿ ಸೆಲ್ಸಿಯಸ್‌  ದಾಖಲಾಗಿತ್ತು.

-masthmagaa.com

Contact Us for Advertisement

Leave a Reply