ಮೊದಲ ಹಂತದ ಪ್ರಯೋಗದಲ್ಲಾದ ಪ್ರತಿಕೂಲ ಘಟನೆ ಬಗ್ಗೆ ಭಾರತ್‌ ಬಯೋಟೆಕ್‌ ಸ್ಪಷ್ಟನೆ.. ಏನಾಗಿತ್ತು?

masthmagaa.com:

ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸುತ್ತಿರೋ ಕೋವಾಕ್ಸಿನ್‌ ಲಸಿಕೆಯ ಮೊದಲನೇ ಹಂತದ ಪ್ರಯೋಗದ ವೇಳೆ ಸ್ವಯಂಸೇವಕನ ಮೇಲೆ ದುಷ್ಪರಿಣಾಮ ಬೀರಿದ್ದನ್ನು ಮುಚ್ಚಿಟ್ಟಿದೆ ಅನ್ನೋ ಅರೋಪಕ್ಕೆ ಕಂಪನಿ ಸ್ಪಷ್ಟನೆ ನೀಡಿದೆ. ಕಳೆದ ಆಗಸ್ಟ್‌ನಲ್ಲಿ ಕೋವಾಕ್ಸಿನ್‌ನ ಮೊದಲನೇ ಹಂತದ ಪ್ರಯೋಗ ನಡೆದಿತ್ತು. ಈ ವೇಳೆ ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಅಸ್ವಸ್ಥನಾಗಿದ್ದ. ಆದ್ರೆ ಈ ವಿಚಾರವನ್ನ ಭಾರತ್‌ ಬಯೋಟೆಕ್‌ ಸಾರ್ವಜನಿಕವಾಗಿ ಬಹಿರಂಗ ಪಡಿಸದೇ ಮುಚ್ಚಿಟ್ಟಿದೆ ಅನ್ನೋ ಆರೋಪ ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿ, ವ್ಯಕ್ತಿ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದು ನಿಜ. ಆದ್ರೆ ಅದನ್ನ ಮುಚ್ಚಿಟ್ಟಿಲ್ಲ. ಘಟನೆ ನಡೆದ 24 ಘಂಟೆ ಒಳಗೆ CDSCO-DCGIಗೆ ವಿಚಾರ ತಿಳಿಸಿಯೇ ಮುಂದಿನ ಹಂತಕ್ಕೆ ಹೋಗಿರೋದು. ಅಷ್ಟೇ ಅಲ್ಲ, ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆದಿದ್ದು, ಆ ಸ್ವಯಂಸೇವಕ ಅಸ್ವಸ್ಥನಾಗಿದ್ದು ಲಸಿಕೆಯಿಂದಲ್ಲ ಅನ್ನೋದು ತಿಳಿದುಬಂದಿದೆ ಅಂತ ಕಂಪನಿ ಹೇಳಿದೆ.

ಭಾರತ್‌ ಬಯೋಟೆಕ್‌ ಕಂಪನಿಯು ಐಸಿಎಂಆರ್‌ ಸಹಯೋಗದೊಂದಿಗೆ ಕೋವಾಕ್ಸಿನ್‌ ಲಸಿಕೆಯನ್ನ ಅಭಿವೃದ್ಧಿ ಪಡಿಸುತ್ತಿದ್ದು, ಮೂರನೇ ಹಂತದ ಮಾನವ ಪ್ರಯೋಗಕ್ಕೆ ತಯಾರಿ ನಡೆಯುತ್ತಿದೆ. ಈ ಲಸಿಕೆ  ಕೊರೋನಾ ವಿರುದ್ಧ ಹೋರಾಡುವಲ್ಲಿ  60 ಪ್ರತಿಶತದಷ್ಟು ಪರಿಣಾಮಕಾರಿಯಾಗುವ ಸಾಧ್ಯತೆ ಇದ್ದು, 2021ರ ಏಪ್ರಿಲ್‌- ಮೇ ವೇಳೆಗೆ ಬಿಡುಗಡೆ ಮಾಡುವ ಗುರಿ ಹೊಂದಿದೆ ಅಂತ ಕಂಪನಿಯ ಉನ್ನತ ಅಧಿಕಾರಿ ಸಾಯಿ ಡಿ. ಪ್ರಸಾದ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply