masthmagaa.com:

ರಾಜ್ಯದಲ್ಲಿ ಬೈಎಲೆಕ್ಷನ್ ಅಖಾಡ ರಂಗೇರಿದ್ದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇವತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮುನಿರತ್ನಗೆ ಡಿಸಿಎಂ ಅಶ್ವತ್ಥ್​ ನಾರಾಯಣ ಮತ್ತು ಕಂದಾಯ ಸಚಿವ ಆರ್. ಅಶೋಕ್ ಸಾಥ್ ನೀಡಿದ್ರು. ಕಾಂಗ್ರೆಸ್​ ಅಭ್ಯರ್ಥಿ ಕುಸುಮಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸಾಥ್ ನೀಡಿದ್ರೆ, ಜೆಡಿಎಸ್​ ಅಭ್ಯರ್ಥಿ ಜೊತೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಬಂದಿದ್ದರು.

ಆದ್ರೆ ಮೂರೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಕೊರೋನಾ ನಿಯಮಗಳನ್ನ ಉಲ್ಲಂಘಿಸಿದ್ದು ಕಂಡುಬಂತು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಗುಂಪು ಸೇರಿದ್ದು ಒಂದುಕಡೆಯಾದ್ರೆ, ಕೆಲವರು ಮಾಸ್ಕ್ ಧರಿಸಿರಲಿಲ್ಲ, ಇನ್ನೂ ಕೆಲವರು ಮಾಸ್ಕ್ ಧರಿಸಿದ್ದರು ಅದು ಮುಖದಿಂದ ಕೆಳಗೆ ಜಾರಿತ್ತು. ರಾಜ್ಯದಲ್ಲಿ ಪ್ರತಿದಿನ 8ರಿಂದ 10 ಸಾವಿರ ಕೊರೋನಾ ಪ್ರಕರಣಗಳು ವರದಿಯಾಗುತ್ತಿದೆ. ಬೆಂಗಳೂರು ಒಂದರಲ್ಲೇ ಮೂರ್ನಾಲ್ಕು ಸಾವಿರ ಪ್ರಕರಣ ದೃಢಪಡುತ್ತಿದೆ. ಇಂತಹ ಸಂದರ್ಭದಲ್ಲಿ ಉಪಚುನಾವಣೆಯ ನೆಪವೊಡ್ಡಿ ಹೀಗೆ ಜನ ಗುಂಪು ಸೇರಿದ್ರೆ, ಸರಿಯಾಗಿ ಮಾಸ್ಕ್ ಧರಿಸದೇ ಕೊರೋನಾ ನಿಯಮಗಳನ್ನ ಉಲ್ಲಂಘಿಸಿದ್ರೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಗುಂಪು ಸೇರಿರುವವರಲ್ಲಿ ಯಾರಾದ್ರೂ ಒಬ್ಬರು ಸೋಂಕಿತರಿದ್ರೂ ಉಳಿದವರಿಗೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಗಮನಹರಿಸಬೇಕು. ತೆರವಾಗಿರುವ ಕ್ಷೇತ್ರಗಳಿಗೆ 6 ತಿಂಗಳೊಳಗಾಗಿ ಉಪಚುನಾವಣೆ ನಡೆಯೋದು ಅನಿವಾರ್ಯ. ಅಟ್​ ದಿ ಸೇಮ್ ಟೈಂ ಕೊರೋನಾ ಹರಡದಂತೆ ತಡೆಯೋದು ಕೂಡ ನಮ್ಮೆಲ್ಲರ ಜವಾಬ್ದಾರಿ.

-masthmagaa.com

Contact Us for Advertisement

Leave a Reply