masthmagaa.com:

ಹೈದ್ರಾಬಾದ್ ಮಹಾನಗರ ಪಾಲಿಕೆ ಮತ್ತು ರಾಜಸ್ಥಾನ, ಅಸ್ಸಾಂನಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬಿಜೆಪಿ ಇದೀಗ ಗೋವಾದಲ್ಲೂ ಜಯಭೇರಿ ಬಾರಿಸಿದೆ. ಗೋವಾದಲ್ಲಿ 48 ಜಿಲ್ಲಾ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಪಕ್ಷ ಬಿಜೆಪಿ 32 ಸೀಟುಗಳನ್ನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಂದು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ.  ಈ ವಿಚಾರವನ್ನ ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ಈ ಫಲಿತಾಂಶವು ಪ್ರಧಾನಿ ಮೋದಿ ಮತ್ತು ಗೋವಾ ಸರ್ಕಾರದ ನೀತಿಗಳ ಮೇಲೆ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವ ಜನತೆ ಇಟ್ಟಿರುವ ನಂಬಿಕೆಯನ್ನ ತೋರಿಸುತ್ತದೆ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಟ್ವೀಟ್ ಮಾಡಿದ್ದಾರೆ.

ಗೋವಾ ಜಿಲ್ಲಾ ಪಂಚಾಯ್ತಿ ಚುನಾವಣೆ ಫಲಿತಾಂಶ-2020:

ಬಿಜೆಪಿ – 32 + 1

ಪಕ್ಷೇತರರು – 7

ಕಾಂಗ್ರೆಸ್ – 4

ಎಂಜಿಪಿ – 3

ಎನ್​ಸಿಪಿ – 1

ಎಎಪಿ – 1

-masthmagaa.com

Contact Us for Advertisement

Leave a Reply