masthmagaa.com:

ಸಿಬಿಎಸ್​ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಡುಕೇಷನ್) 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಒಟ್ಟಾರೆ ಶೇ. 91.46ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 2019ರಲ್ಲಿ ಶೇ. 91.10ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ವಿಶೇಷ ಅಂದ್ರೆ ಪ್ರದೇಶವಾರು ಫಲಿತಾಂಶದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

ಪ್ರದೇಶವಾರು ಫಲಿತಾಂಶ:

1. ತಿರುವನಂತಪುರ – 99.28%

2. ಚೆನ್ನೈ- 98.95%

3. ಬೆಂಗಳೂರು –98.23%

4. ಪುಣೆ –98.05%

5. ಅಜ್ಮೇರ್- 96.93%

6. ಪಂಚಕುಲಾ- 94.31%

7. ಭುವನೇಶ್ವರ- 93.20%

8. ಭೋಪಾಲ್‌ –92.86%

9. ಚಂಡೀಗಢ–91.83%

10. ಪಾಟ್ನಾ –90.69%

11. ಡೆಹ್ರಾಡೂನ್ –89.72%

12. ಪ್ರಯಾಗ್‌ರಾಜ್- 89.12%

13. ನೋಯ್ಡಾ –87.51%

14. ದೆಹಲಿ ಪಶ್ಚಿಮ – 85.96%

15. ದೆಹಲಿ ಪೂರ್ವ – 85.79%

ಇದನ್ನೂ ಓದಿ: ಕ್ಯಾಮರಾ ಆಕಾರದ ‘ಕ್ಲಿಕ್’ ಮನೆ.. ಕೆನಾನ್, ಎಪ್ಸಾನ್, ನಿಕಾನ್ ಎಂಬ ಮಕ್ಕಳು

ಈ ಬಾರಿ 18,73,015 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 17,13,121 ಮಕ್ಕಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಬಾಲಕಿಯರು ಶೇ. 93.31 ಮತ್ತು ಬಾಲಕರು ಶೇ. 90.14ರಷ್ಟು ಉತ್ತೀರ್ಣರಾಗಿದ್ದಾರೆ. ಫಲಿತಾಂಶವು www.cbseresults.nic.in ವೆಬ್‌ಸೈಟ್​ನಲ್ಲಿ ಲಭ್ಯವಿದೆ.

ಸಂಸ್ಥೆವಾರು ಫಲಿತಾಂಶ:

1. ಕೇಂದ್ರೀಯ ವಿದ್ಯಾಲಯ – 99.23%

2. ಜವಾಹರ್ ನವೋದಯ ವಿದ್ಯಾಲಯ – 98.66%

3. ಸೆಂಟ್ರಲ್ ಟಿಬೆಟಿಯನ್ ಸ್ಕೂಲ್ ಅಡ್ಮಿನಿಸ್ಟ್ರೇಷನ್ – 93.67%

4. ಖಾಸಗಿ ಸಂಸ್ಥೆಗಳು – 92.81%

5. ಸರ್ಕಾರಿ ಸಂಸ್ಥೆಗಳು – 80.91%

6. ಅನುದಾನಿತ ಸಂಸ್ಥೆಗಳು – 77.82%

-masthmagaa.com

Contact Us for Advertisement

Leave a Reply