60 ಡಿಗ್ರಿ ಸೆಲ್ಶಿಯಸ್​​ನಲ್ಲೂ ಸಾಯಲ್ಲ ಕೊರೋನಾ​..! ಶಾಕಿಂಗ್ ವರದಿ

masthmagaa.com:

ಕೊರೋನಾ ವೈರಸ್ ಉಷ್ಣಾಂಶ ಹೆಚ್ಚಾದ್ರೂ ಸಾಯೋದಿಲ್ಲ.. ಹೈ ಟೆಂಪರೇಚರ್​​ನಲ್ಲೂ ಸಕ್ರಿಯವಾಗಿರುತ್ತೆ ಅನ್ನೋ ಶಾಕಿಂಗ್ ವಿಚಾರ ಹೊರಬಿದ್ದಿದೆ. ಫ್ರಾನ್ಸ್​ನ ವಿಜ್ಞಾನಿಗಳ ತಂಡವೊಂದು ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ಬಯಲಾಗಿದೆ. ಈ ಹಿಂದೆ ಕೊರೋನಾ ವೈರಸ್ ಹೆಚ್ಚಿನ ತಾಪಮಾನದಲ್ಲಿ ಸತ್ತುಹೋಗುತ್ತೆ ಎಂದು ಹೇಳಲಾಗಿತ್ತು.

ಐಕ್ಸ್ ಮಾರ್ಸೆಲ್ಲೆ ಯೂನಿವರ್ಸಿಟಿಯ ಪ್ರೊಫೆಸರ್ ರೆಮೀ ಶೆರೆಲ್ ತಮ್ಮ ತಂಡದೊಂದಿಗೆ ಸೇರಿ ಸಂಶೋಧನೆ ನಡೆಸಿ, ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ರೆಮೀ ಮತ್ತವರ ತಂಡ 60 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಕೊರೋನಾ ಪರೀಕ್ಷೆ ನಡೆಸಿದ್ದರು. ಈ ತಾಪಮಾನದಲ್ಲಿ 1 ಗಂಟೆ ಪರೀಕ್ಷೆ ನಡೆಸಿದ ಬಳಿಕವೂ ಕೊರೋನಾ ವೈರಸ್ ಸಕ್ರಿಯವಾಗಿಯೇ ಇತ್ತು. ಜೊತೆಗೆ 92 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ 15 ನಿಮಿಷ ಇರಿಸಿದ್ರೆ, ಕೊರೋನಾ ನಿಷ್ಕ್ರಿಯವಾಗುತ್ತೆ ಅಂತ ಕೂಡ ವಿಜ್ಞಾನಿಗಳ ತಂಡ ಮಾಹಿತಿ ನೀಡಿದೆ.

ಈ ಹಿಂದೆ ತಾಪಮಾನ ಹೆಚ್ಚಾದ್ರೆ ಕೊರೋನಾ ಹಾವಳಿ ಕಡಿಮೆಯಾಗುತ್ತೆ. ಭಾರತದಲ್ಲಿ ಸದ್ಯ ಬೇಸಿಗೆ ಇರೋದ್ರಿಂದ ಇಲ್ಲಿ ಕೊರೋನಾ ಆಟ ನಡೆಯಲ್ಲ ಎಂದು ಹೇಳಲಾಗಿತ್ತು. ಆದ್ರೆ ಈ ನಂಬಿಕೆಗೆ ಹೊಸ ಸಂಶೋಧನೆಯಿಂದ ಏಟು ಬಿದ್ದಿದೆ. ಭಾರತದಲ್ಲಿ ಹೆಚ್ಚೆಂದ್ರೆ 50 ಡಿಗ್ರಿ ಸೆಲ್ಶಿಯಸ್​ ತಾಪಮಾನ ದಾಖಲಾಗುತ್ತೆ. ಆದ್ರೆ ಕೊರೋನಾ 60 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಸಕ್ರಿಯವಾಗಿರುತ್ತೆ ಅನ್ನೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply