ಕೊರೋನಾಗೆ ಭಾರತದಲ್ಲೇ ರೆಡಿಯಾಗ್ತಿದೆ ಮದ್ದು! ಮೂಗಿನ ಮೂಲಕ ಲಸಿಕೆ

masthmagaa.com:

ಹೈದ್ರಾಬಾದ್: ಕೊರೋನಾ ವೈರಸ್​​ಗೆ ಭಾರತದಲ್ಲಿ ಔಷಧ ಕಂಡು ಹಿಡಿಯಲಾಗುತ್ತಿದೆ. ಹೈದ್ರಾಬಾದ್​ನಲ್ಲಿರುವ ಭಾರತ್ ಬಯೋಟೆಕ್ ಎಂಬ ಸಂಸ್ಥೆ ಕೋರೋಫ್ಲೂ ಎಂಬ ಹೆಸರಿನಲ್ಲಿ ಈ ಔಷಧ ಸಿದ್ಧಪಡಿಸುತ್ತಿದೆ. ವಿಶೇಷ ಅಂದ್ರೆ ಈ ಔಷಧವನ್ನು ಇಂಜೆಕ್ಷನ್ ಮೂಲಕ ದೇಹಕ್ಕೆ ನೀಡುವುದಿಲ್ಲ. ಪೋಲಿಯೋ ರೀತಿ ಬಾಯಿ ಮೂಲಕವೂ ನೀಡೋದಿಲ್ಲ. ಮೂಗಿನ ಮೂಲಕ ಒಂದು ಹನಿಯನ್ನು ದೇಹಕ್ಕೆ ನೀಡಲಾಗುತ್ತೆ. ಭಾರತ್ ಬಯೋಟೆಕ್, ವಿಸ್ಕಾನ್ಸಿನ್ ಮೆಡಿಸನ್ ವಿಶ್ವವಿದ್ಯಾಲಯ ಮತ್ತು ಫ್ಲೂಜೆನ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂರು ಸಂಸ್ಥೆಗಳ ವಿಜ್ಞಾನಿಗಳು ಒಟ್ಟಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಇನ್​ಫ್ಲೂಯೆಂಜಾ ಕಾಯಿಲೆಯ ಔಷಧಿಯಾದ ಎಂ2ಎಸ್​ಆರ್​​ ಆಧಾರವಾಗಿಟ್ಟುಕೊಂಡು ಕೋರೋ ಫ್ಲೋ ಔಷಧ ಸಿದ್ಧಪಡಿಸಲಾಗ್ತಿದೆ. ಇದು ದೇಹದೊಳಗೆ ಹೋಗುತ್ತಿದ್ದಂತೆ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತೆ. ವಿಜ್ಞಾನಿಗಳು ಈ ಬಾರಿ ಎಂ2ಎಸ್​ಆರ್​​ ಔಷಧಿಯಲ್ಲಿ ಕೋವಿಡ್​​-19ರ ವಿರುದ್ಧ ಹೋರಾಡುವ ಜೀನ್ ಸೀಕ್ವೆನ್ಸ್​ ಸೇರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತ್ ಬಯೋಟೆಕ್​ ಸಂಸ್ಥೆಯ​ ಬ್ಯುಸಿನೆಸ್ ಡೆವೆಲಪ್​​ಮೆಂಟ್ ಅಧ್ಯಕ್ಷ ಡಾ.ರೈಶೆಸ್ ಎಲಾ, ನಾವು ಈ ಔಷಧವನ್ನು ಭಾರತದಲ್ಲೇ ಉತ್ಪಾದನೆ ಮಾಡುತ್ತೇವೆ. ಮೊದಲಿಗೆ ಕೋರೋ ಫ್ಲೂ ಕ್ಲಿನಿಕಲ್ ಟ್ರಯಲ್ ನಡೆಯಬೇಕಿದೆ. ಆನಂತರ ಇಲ್ಲೇ 300 ಮಿಲಿಯನ್ ಡೋಜ್​​ನಷ್ಟು ಔಷಧ ಉತ್ಪಾದನೆ ಮಾಡುತ್ತೇವೆ ಎಂದಿದ್ದಾರೆ. ಆದ್ರೆ 2020ರ ಅಂತ್ಯದ ವೇಳೆಗಷ್ಟೇ ಇದರ ಪರೀಕ್ಷೆ ನಡೆಸಲು ಸಾಧ್ಯ ಅಂತ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply