ಆಸ್ಪತ್ರೆಯಿಂದ ಓಡಿಹೋದ ತಬ್ಲಿಘಿ ಜಮಾತ್​​ನ ಕೊರೋನಾ ರೋಗಿ..!

masthmagaa.com:

ಉತ್ತರಪ್ರದೇಶ: ದೇಶದಲ್ಲಿ ದಿನೇ ದಿನೇ ಕೊರೋನಾ ವೈರಸ್ ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಈ ನಡುವೆ ಜನರ ಬೇಜವಾಬ್ದಾರಿ ಕೂಡ ಕಡಿಮೆಯಿಲ್ಲ.. ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ಕೊರೋನಾ ವೈರಸ್ ಪೀಡಿತನೊಬ್ಬ ಆಸ್ಪತ್ರೆಯಿಂದ ಓಡಿಹೋಗಿದ್ದಾನೆ. ನೇಪಾಳ ಮೂಲದ ಈ ವ್ಯಕ್ತಿಯಲ್ಲಿ 3 ದಿನಗಳ ಹಿಂದೆ ಕೊರೋನಾ ವೈರಸ್ ಇರೋದು ಪತ್ತೆಯಾಗಿತ್ತು. ಈತ ತಬ್ಲಿಘಿ ಜಮಾತ್ ಜೊತೆಗೂ ಸಂಬಂಧ ಹೊಂದಿದ್ದ ಅಂತ ತಿಳಿದು ಬಂದಿತ್ತು. ಈತನನ್ನು ಆಸ್ಪತ್ರೆಯ ಐಸೋಲೇಷನ್ ವಾರ್ಡ್​​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ವೈದ್ಯರು ಮತ್ತು ಸಿಬ್ಬಂದಿ ಕಣ್ತಪ್ಪಿಸಿ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಓಡಿಹೋಗಿದ್ದಾನೆ.

-masthmagaa.com

Contact Us for Advertisement

Leave a Reply