ಕೊರೋನಾ ಸವಾಲು ಮಾತ್ರವಲ್ಲ..ಅವಕಾಶ ಕೂಡ ಹೌದು: ರಾಹುಲ್ ಗಾಂಧಿ

masthmagaa.com:

ದೆಹಲಿ: ಕೊರೋನಾ ವೈರಸ್ ಒಂದು ಸವಾಲಿನ ಜೊತೆಗೆ ದೊಡ್ಡ ಅವಕಾಶವೂ ಹೌದು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೋವಿಡ್-19 ಒಂದು ಸವಾಲಾಗಿದೆ. ಆದ್ರೆ ಇದೊಂದು ಅವಕಾಶ ಕೂಡ ಹೌದು.. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಮ್ಮಲ್ಲಿರುವ ವಿಜ್ಞಾನಿಗಳ ಸಮೂಹ, ಇಂಜಿನಿಯರ್​​ಗಳು ಮತ್ತು ಡೇಟಾ ತಜ್ಞರನ್ನು ಒಟ್ಟುಗೂಡಿಸಿಕೊಂಡು ಹೊಸ ಪರಿಹಾರವನ್ನು ಕಂಡು ಹಿಡಿಯುವತ್ತ ಕೆಲಸ ಮಾಡಬೇಕಿದೆ ಎಂದಿದ್ದಾರೆ. ಅಂದ್ರೆ ಅವರೆಲ್ಲರನ್ನೂ ಸರಿಯಾದ ರೀತಿಯಲ್ಲಿ ಬಳಸಲು ಇದು ಉತ್ತಮ ಅವಕಾಶ ಎಂದಿದ್ದಾರೆ.

ಜೊತೆಗೆ ದೇಶದಲ್ಲಿ ಕೊರೋನಾ ಪರೀಕ್ಷೆ ಪ್ರಮಾಣ ತುಂಬಾ ಕಡಿಮೆ ಇದೆ. ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚಿಸಬೇಕು. ಜೊತೆಗೆ ಬುದ್ಧಿವಂತಿಕೆಯಿಂದ ಪರೀಕ್ಷೆಗಳನ್ನು ನಡೆಸಿ, ರಾಜ್ಯ ಸರ್ಕಾರಗಳಿಗೂ ಮಾರ್ಗದರ್ಶನ  ನೀಡಬೇಕು.. ನನ್ನ ಮಾತನ್ನು ಟೀಕೆ ಎಂದು ಭಾವಿಸಬೇಡಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply