ಉಚಿತ ರೇಷನ್​​​ಗೆ 2 ಕಿ.ಮೀ. ಉದ್ದದ ಸಾಲು..! ಒಬ್ಬರಿಗೂ ಸಿಗಲಿಲ್ಲ ರೇಷನ್​..!

masthmagaa.com:

ಉತ್ತರ ಪ್ರದೇಶ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್​ಡೌನ್ ಹೇರಲಾಗಿದೆ. ಈ ನಡುವೆ ಕೆಲಸವಿಲ್ಲದ ಕೆಲ ದುಷ್ಟರು ಹರಡುತ್ತಿರುವ ವದಂತಿಯಿಂದ ಜನ ಸೇರಿದಂತೆ ಅಧಿಕಾರಿಗಳು ಕೂಡ ಹೈರಾಣಾಗಿ ಹೋಗ್ತಿದ್ದಾರೆ. ಉತ್ತರ ಪ್ರದೇಶದ ಲಖೀಮ್​ಪುರ ಖೀರೀ ಜಿಲ್ಲೆಯಲ್ಲೂ ಇಂಥಹದ್ದೇ ಘಟನೆ ವರದಿಯಾಗಿದೆ.

ಇಲ್ಲಿನ ಮಿನಾರ್ ಮಸೀದಿ ಬಳಿ ಅಂಜುಮನ್ ಕಮಿಟಿ ಕಡೆಯಿಂದ ಕೆಲವು ಬಡ ವಿಧವೆಯರಿಗೆ ರೇಷನ್ ಹಂಚಲು ನಿರ್ಧರಿಸಿತ್ತು. ಆದ್ರೆ ನಗರದಲ್ಲಿ ಎಲ್ಲರಿಗೂ ಉಚಿತವಾಗಿ ರೇಷನ್ ಹಂಚುತ್ತಿದ್ದಾರೆ ಅಂತ ಯಾರೋ ವದಂತಿ ಹಬ್ಬಿಸಿದ್ದಾರೆ. ಸಾವಿರಾರು ಜನ ಸಾಮಾಜಿಕ ಅಂತರವನ್ನು ಮರೆತು, ಬ್ಯಾಗ್ ಹಿಡಿದುಕೊಂಡು ಬಂದಿದ್ದಾರೆ. ಅಲ್ಲದೆ ಸುಮಾರು 2 ಕಿಲೋಮೀಟರ್​​ವರೆಗೆ ಜನ ಸಾಲುಗಟ್ಟಿ ನಿಂತಿದ್ದಾರೆ.  ಇನ್ನು ಕೆಲವರಂತೂ ತಮ್ಮ ಸಾಲಿನಲ್ಲಿ ಬ್ಯಾಗ್​ಗಳನ್ನು ಇಟ್ಟು, ಪಕ್ಕಕ್ಕೆ ಹೋಗಿ ಗುಂಪು ಕಟ್ಟಿಕೊಂಡು ಮಾತನಾಡುತ್ತಾ ಕುಳಿತಿದ್ದರು. ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಜನರನ್ನು ಚದುರಿಸಿದ್ದಾರೆ.

ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸಿದ ಅಂಜುಮನ್ ಕಮಿಟಿ, ನಾವು ಕೆಲ ಬಡ ವಿಧವೆಯರಿಗೆ ಆಹಾರ ಸಾಮಗ್ರಿ ಹಂಚಲು ನಿರ್ಧರಿಸಿದ್ದೆವು. ಆದ್ರೆ ಇಲ್ಲಿ ಸಾವಿರಾರು ಜನ ಸಾಲುಗಟ್ಟಿ ನಿಂತಿದ್ರು. ಹೀಗಾಗಿ ನಾವು ಆಹಾರ ಸಾಮಾಗ್ರಿ ವಿತರಿಸಲಿಲ್ಲ ಅಂತ ಹೇಳಿದೆ.

ಇದ್ರಿಂದಾಗಿ ಬೆಳಗ್ಗೆ 6 ಗಂಟೆಯಿಂದ ಸಾಲುಗಟ್ಟಿ ನಿಂತಿದ್ದ ಜನ, ಮಧ್ಯಾಹ್ನದವರೆಗೆ ಕಾದು, ಬಳಿಕ ಖಾಲಿ ಕೈಯಲ್ಲಿ ಮನೆಗೆ ಹೋಗಿದ್ದಾರೆ.

-masthmagaa.com

Contact Us for Advertisement

Leave a Reply