10 ಹೊಸ ಅವತಾರ ಎತ್ತಿದೆ ಕೊರೋನವೈರಸ್!

masthmagaa.com:

ಸ್ನೇಹಿತರೆ… ಕೊರೋನವೈರಸ್ ದಿನದಿನಕ್ಕೂ ಹೊಸ ಅವತಾರ ಎತ್ತುತ್ತಿದೆ. ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ಹೊಸ ಕೊರೋನವೈರಸ್ ಈಗ ಮತ್ತೆ ಹತ್ತು ರೂಪಗಳನ್ನು ಪಡೆದುಕೊಂಡಿದೆ ಅನ್ನೋ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ‘ವೈರಸ್ ಮ್ಯುಟೇಶನ್’ ಎಂದು ಕರೆಯಲಾಗುತ್ತೆ. ಪ್ರಾಣಿಗಳಲ್ಲಿ ಕಾಯಿಲೆಗೆ ಕಾರಣವಾಗುತ್ತಿದ್ದ ಈ ವೈರಾಣು ಮನುಷ್ಯನಿಗೆ ಹರಡಲು ಕಾರಣಗಳಲ್ಲಿ ‘ವೈರಸ್ ಮ್ಯುಟೇಶನ್’ ಕೂಡ ಒಂದು. ಇದರ ಅರ್ಥ ಏನು ಎಂದರೆ, ಒಂದು ವೈರಾಣು ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳಬೇಕು ಎಂದರೆ ಅತಿಥಿ ಜೀವಕೋಶ ಬೇಕು. ಜೀವಕೋಶದ ಒಳಗೆ ಎಂಟರ್ ಆಗಲು ವೈರಾಣುವಿನ ಹೊರಭಾಗದಲ್ಲಿ ಒಂದು ಕೊಂಬು ಇರುತ್ತದೆ. ಆ ಕೊಂಬಿಗೂ ಅತಿಥಿ ಜೀವಿಯ ಜೀವಕೋಶದ ಹೊರಗೆ ಇರುವ ಕೊಂಬಿಗೂ (ಸೆಲ್ ರಿಸೆಪ್ಟರ್ಸ್) ಹೊಂದಾಣಿಕೆ ಆದರೆ ಮಾತ್ರ ವೈರಾಣು ಜೀವಕೋಶದ ಒಳಗೆ ಪ್ರವೇಶ ಮಾಡಲು ಸಾಧ್ಯ. ಒಳಗೆ ಪ್ರವೇಶ ಮಾಡಿದ ಬಳಿಕವಷ್ಟೇ ವೈರಾಣು ತನ್ನ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡು ಕಾಯಿಲೆ ಬರಿಸಲು ಸಾಧ್ಯ. ಹೀಗಾಗಿ ಪ್ರಾಣಿಗಳಲ್ಲಿ ಕಾಯಿಲೆ ಉಂಟುಮಾಡುವ ವೈರಾಣು ಮನುಷ್ಯನಲ್ಲಿ ಕಾಯಿಲೆ ಉಂಟುಮಾಡುವುದಿಲ್ಲ.

ಸರಳವಾಗಿ ಅರ್ಥ ಆಗಬೇಕು ಎಂದರೆ, ವೈರಾಣುವಿನ ಮೇಲೆ ಇರುವ ಕೊಂಬನ್ನು ಬೀಗದ ಕೀ ಎಂದೂ, ಪ್ರಾಣಿಯ ಜೀವಕೋಶದ ಮೇಲೆ ಇರುವ ಸೆಲ್ ರಿಸೆಪ್ಷರ್ಸ್​ಅನ್ನು ಬಾಗಿಲಿನ ಬೀಗ ಎಂದೂ ಅರ್ಥಮಾಡಿಕೊಳ್ಳಿ. ವೈರಾಣು ಜೀವಕೋಶದ ಒಳಗೆ ಎಂಟರ್ ಆಗಬೇಕು ಎಂದರೆ ಅದರ ಬಳಿ ಇರುವ ಬೀಗದ ಕೀಗೂ, ಜೀವಕೋಶದ ಮೇಲೆ ಇರುವ ಸೆಲ್ ರಿಸೆಪ್ಷರ್ಸ್ ಅನ್ನೋ ಬೀಗಕ್ಕೂ ತಾಳೆ ಆಗಬೇಕು. ಹೀಗಾಗಿ ಪ್ರಾಣಿಗಳಲ್ಲಿ ಕಾಯಿಲೆ ಬರಿಸುವ ವೈರಾಣುಗಳು ಮನುಷ್ಯನಲ್ಲಿ ಸಾಮಾನ್ಯವಾಗಿ ಕಾಯಿಲೆ ಬರಿಸುವುದಿಲ್ಲ. ಆದರೆ ವೈರಾಣುಗಳಲ್ಲಿ ವಿಕಾಸವಾದ ತುಂಬಾ ಬೇಗನೆ ಆಗುತ್ತದೆ. ಆಗಾಗ ಅದರ ಕೊಂಬು ಅಥವಾ ಬೀಗದ ಕೀ ಬದಲಾಗುತ್ತಿರುತ್ತದೆ. ಹೀಗೆ ಮನುಷ್ಯನ ಜೀವಕೋಶದ ಬಾಗಿಲನ್ನು ತೆರೆಯುವ ಕೊಂಬು ವೈರಾಣುವಿಗೆ ಬಂದಾಗ ಅದಕ್ಕೆ ಮನುಷ್ಯನ ದೇಹವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಆಗ ಪ್ರಾಣಿಗಳಿಂದ ಕಾಯಿಲೆ ಮನುಷ್ಯನಿಗೂ ಹರಡುತ್ತದೆ. ಈಗ ಬಂದಿರೋ ಹೊಸ ಕೊರೋನವೈರಸ್ (Novel CoronaVirus) ಕೂಡ ಅಷ್ಟೆ. ಪ್ರಾಣಿಗಳಿಂದಲೇ ಮನುಷ್ಯನಿಗೆ ಹರಡಿ COVID-19 ಕಾಯಿಲೆ ಸೃಷ್ಟಿಯಾಗಿದೆ. ಮನುಷ್ಯನಿಗೆ ಹರಡಿದ ಬಳಿಕವೂ ಮತ್ತೆ 10 ಹೊಸರೂಪಗಳನ್ನು ಈ ವೈರಾಣು ಪಡೆದುಕೊಂಡಿದೆ ಅನ್ನೋದು ಹೊಸ ಹಾಗಾದರೆ ವಿಚಾರ‌. ಅದರಲ್ಲಿ a2a ಎನ್ನುವ ರೂಪದ ವೈರಾಣು ಜಗತ್ತಿನ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ನಿಮಗೆ ಗೊತ್ತಿರಲಿ.., ಈಗ ಚರ್ಚೆ ಆಗುತ್ತಿರೋ ಕೊರೋನವೈರಸ್ 7ನೇ ತಲೆಮಾರಿನ ಹೊಸ ವೈರಸ್ ಅಷ್ಟೆ. ಆದರೆ 6 ಥರದ ಕೊರೋನವೈರಸ್ ಮೊದಲಿಂದಲೂ ಇದ್ದವು.

-masthmagaa.com

Contact Us for Advertisement

Leave a Reply