ತೆಲಂಗಾಣದಲ್ಲಿ ಮೇ 29ರವರೆಗೆ ಲಾಕ್​​​ಡೌನ್​​! ಅಂಗಡಿಗಳು ಇನ್ನೂ ಬಂದ್​​

masthmagaa.com:

ತೆಲಂಗಾಣ: ಭಾರತದಲ್ಲಿ 3ನೇ ಹಂತದ ಲಾಕ್​ಡೌನ್ ನಡೆಯುತ್ತಿದ್ದು, ಮೇ 17ರಂದು ಕೊನೆಗೊಳ್ಳಲಿದೆ. ಆದ್ರೆ ತೆಲಂಗಾಣದಲ್ಲಿ ಮೇ 29ರವರೆಗೆ ಲಾಕ್​ಡೌನ್ ಮುಂದುವರಿಸಲು ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರು ಲಾಕ್​ಡೌನ್ ಮುಂದುವರಿಸುವಂತೆ ಒತ್ತಾಯಿಸ್ತಿದ್ದಾರೆ. ಹೀಗಾಗಿ ಲಾಕ್​​ಡೌನ್ ಮುಂದುವರಿಸಲು ನಿರ್ಧರಿಸಿದ್ದು, ಪ್ರಧಾನಿ ಮೋದಿಯವರಿಗೂ ನಿರ್ಧಾರ ತಿಳಿಸಿದ್ದೇವೆ ಎಂದಿದ್ದಾರೆ.

ತೆಲಂಗಾಣದಲ್ಲಿ ಈವರೆಗೆ 1,096 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 6 ಜಿಲ್ಲೆಗಳು ರೆಡ್​ ಜೋನ್​ನಲ್ಲಿದ್ರೆ, 18 ಜಿಲ್ಲೆಗಳು ಆರೆಂಜ್ ಜೋನ್​ನಲ್ಲಿವೆ. 3 ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸೋಂಕು ಪತ್ತೆಯಾಗಿದೆ. ಕೇಂದ್ರ ಸರ್ಕಾರ ರೆಡ್​​ ಜೋನ್​​ನಲ್ಲೂ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದರೂ, ಹೈದರಾಬಾದ್, ಮೆದ್​ಚಾಲ್​, ಸೂರ್ಯಪೇಟ್​, ವಿಕಾರಾಬಾದ್​​​ನಲ್ಲಿ ಇನ್ನೂ ಯಾವುದೇ ಅಂಗಡಿಗಳನ್ನು ತೆರೆದಿಲ್ಲ.

ಈ ಹಿಂದೆಯೂ ಕೇಂದ್ರ ಸರ್ಕಾರ 3ನೇ ಹಂತದ ಲಾಕ್​ಡೌನ್ ಘೋಷಿಸುವ ಮುನ್ನವೇ ತೆಲಂಗಾಣ ಮೇ 7ರವರೆಗೆ ಲಾಕ್​​​ಡೌನ್ ವಿಸ್ತರಿಸಿತ್ತು. ಇದೀಗ ಮತ್ತೆ ಲಾಕ್​​​ಡೌನ್ ವಿಸ್ತರಣೆಗೆ ನಿರ್ಧರಿಸಿದೆ.

-masthmagaa.com

Contact Us for Advertisement

Leave a Reply